ಮಂಗಳೂರು, ಜ.26 (DaijiworldNews/PY): ಗಣರಾಜ್ಯೋತ್ಸವದಂದು ಎಲ್ಲಾ ಸರ್ಕಾರಿ ಸಂಸ್ಥೆಯ ಕಟ್ಟಡಗಳು ಅಥವಾ ಕ್ಯಾಂಪನ್ಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವುದು ವಾಡಿಕೆ. ಆದರೆ, ನಗರದ ಹೊರವಲಯದಲ್ಲಿರುವ ಬೆಳ್ಮ ಗ್ರಾಮ ಪಂಚಾಯತ್ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿಲ್ಲ.

ಬೆಳ್ಮ ಗ್ರಾಮ ಪಂಚಾಯತ್ನಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಿಲ್ಲ. ಸರ್ಕಾರದ ನಿಯಮದ ಪ್ರಕಾರ ಬೆಳಗ್ಗೆ 9 ಗಂಟೆಯ ಮೊದಲ ಧ್ವಜವನ್ನು ಹಾರಿಸಬೇಕು. ಆದರೆ, ಸರ್ಕಾರದ ನಿಯಮಗಳು ಪಿಡಿಒಗೆ ಅನ್ಯಯಿಸುವುದಿಲ್ಲವೇ? ಎಂದು ಬೆಳ್ಮ ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಬೆಳ್ಮದ ಗ್ರಾಮಸ್ಥರು ಪಿಡಿಒನ ನೀರಸ ವರ್ತನೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಣರಾಜ್ಯೋತ್ಸವ ದಿನದಂದು ರಾಷ್ಟ್ರಧ್ವಜವನ್ನು ಹಾರಿಸದಿದ್ದರೂ ಕೂಡಾ ಯಾವುದೇ ಕ್ರಮ ಕೈಗೊಳ್ಳದೇ ಮೌನವಾಗಿರುವ ತಾಲೂಕು ಪಂಚಾಯತ್ನ ಸಿಇಒ ಮೇಲೆ ಶಂಕೆ ವ್ಯಕ್ತವಾಗಿದೆ.
ಈ ನಿಟ್ಟಿನಲ್ಲಿ ಬೆಳ್ಮ ಗ್ರಾಮಸ್ಥರು ಪಿಡಿಒ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಬೆಳ್ಮ ಪಿಡಿಒ ಯುವಕರ ಸಹಾಯದಿಂದ ಧ್ವಜಾರೋಹಣ ನೆರವೇರಿಸಿದ್ದಾರೆ. ರ್ಧವಜಾರೋಹಣ ಸಂದರ್ಭ ಪಿಡಿಒ ಚಪ್ಪಲಿ ಧರಿಸಿಕೊಂಡ ಧ್ವಜಾರೋಹಣ ಮಾಡಿದ್ದು, ಇದನ್ನು ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನ ಎಂದು ಪರಿಗಣಿಸಿದ್ದಾರೆ.