ಉಡುಪಿ, ಜ.26 (DaijiworldNews/MB) : ಉಡುಪಿ ಪರ್ಕಳ ಇಲ್ಲಿನ, ಬಾಬು ರಾಯ ಸರ್ಕಲ್ನ ಬಳಿ ಉಳಿಮೆ ಮಾಡುವ ಟ್ರ್ಯಾಕ್ಟರ್ ಅನ್ನು ಬಳಸಿ, ಪರ್ಕಳ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಕಿಸಾನ್ ಘಟಕದ ವತಿಯಿಂದ 71ನೇ ಗಣತಂತ್ರದ ಅಂಗವಾಗಿ ಸ್ಥಳೀಯರೂ ಕೃಷಿಕರೂ ಆದ, ಹಿರಿಯ ಕಾಂಗ್ರೆಸ್ ಮುಖಂಡ ಶಂಭುಶೆಟ್ಟಿ ಶೆಟ್ಟಿ ಬೆಟ್ಟುರವರು ದೀಪ ಬೆಳಗಿಸಿ, ಪ್ರತಿಭಟನೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಕಾಂಗ್ರೆಸ್ನ ಕಿಸಾನ್ ಘಟಕದ ಜಿಲ್ಲಾಧ್ಯಕ್ಷರಾದ ಎಲ್ಲೂರು ಶಶಿಧರ ಶೆಟ್ಟಿರವರು ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಹಾಗೂ ಅದರ ಸಾಧಕ ಬಾಧಕಗಳನ್ನು ಸವಿಸ್ತಾರವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಾವರ ಕಾಂಗ್ರೆಸ್ ಪಕ್ಷದ ಕಿಸಾನ್ ಘಟಕದ ಅಧ್ಯಕ್ಷರಾದ ಹರೀಶ್ ಶೆಟ್ಟಿ ಕೀಳಂಜೆ, ಜಯ ಶೆಟ್ಟಿ ಬನ್ನಂಜೆ, ಮೋಹನದಾಸ್ ನಾಯಕ್ ಪರ್ಕಳ, ಉಪೇಂದ್ರ ನಾಯ್ಕ್ ತುಳಜಾ, ಪರ್ಕಳ, ಮಂಜಪ್ಪ ಸನಿಲ್ ಕೀಳಂಜೆ, ಅಶೋಕ್ ಪೂಜಾರಿ ಕೀಳಂಜೆ, ವಾಲ್ಟರ್ ಡಿಸೋಜ ಕೊಳಲಗಿರಿ, ಎ.ಪಿ.ರಾವ್ ಅಚ್ಚುತ ನಗರ ಪರ್ಕಳ, ಎಚ್ ರಾಜು ಪೂಜಾರಿ, ಪ್ರಕಾಶ್, ಬಿ.,ನಾಯ್ಕ್ ಅಬ್ದುಲ್ ರಹೀಂ ಪರ್ಕಳ, ರಾಜೇಶ್ ಶೆಟ್ಟಿ, ಸುಧೀರ್ ಶೆಟ್ಟಿ, ಹಿರಿಯಡ್ಕ, ದೇವಿಪ್ರಸಾದ್ ಆಚಾರ್ಯ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಗಣೇಶ್ ರಾಜ್ ಬೆಟ್ಟು ಸಂಘಟಿಸಿ, ಸ್ವಾಗತಿಸಿ ವಂದನಾರ್ಪಣೆಗೈದರು.