ಉಡುಪಿ, ಜ.26 (DaijiworldNews/PY): ನಿಟ್ಟೂರು ಬಾಲ ನ್ಯಾಯ ಮಂಡಳಿಯಲ್ಲಿ ನಡೆದ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಡುಪಿ ಜೆ.ಎಂ.ಎಫ್.ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಬಾಲ ನ್ಯಾಯ ಮಂಡಳಿಯ ಅಧ್ಯಕ್ಷ ಇರ್ಫಾನ್ ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವದ ಶುಭ ಹಾರೈಸಿದರು.





ಬಳಿಕ ವೀಕ್ಷಣಾಲಯದ ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನುದ್ದೇಶಿಸಿ ಮಾತನಾಡಿದ ಅವರು, "ಉತ್ತಮ ಶಿಕ್ಷಣ, ಒಳ್ಳೆಯ ನಡತೆ ಬೆಳೆಸಿಕೊಂಡು ಜೀವನದಲ್ಲಿ ಮುಂದೆ ತಾವು ಕೂಡ ಅಧಿಕಾರಿಗಳಾಗಿ ಬನ್ನಿ" ಎಂದು ಕರೆ ನೀಡಿದರು.
ಬಾಲನ್ಯಾಯಮಂಡಳಿಯ ಸದಸ್ಯ ರಾಜೇಶ್, ಅಮೃತಕಲಾ, ಭದ್ರಿನಾಥ ನಾಯಿರಿ, ಹಿರಿಯ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ, ವೀಕ್ಷಣಾಲಯದ ಪರಿವೀಕ್ಷಣಾಧಿಕಾರಿ ಗಣೇಶ್ ಮರಾಠೆ, ಉಡುಪಿ ಎಸ್ಪಿ ಕಚೇರಿಯ ಕಿರಿಯ ಕಾನೂನು ಅಧಿಕಾರಿ ಮುಮ್ಯಾಝ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ಉಪಸ್ಥಿತರಿದ್ದರು.