ಮಂಗಳೂರು, ಜ.26 (DaijiworldNews/PY): ದೇಶದಾದ್ಯಂತ ಇಂದು 72ನೇ ಗಣರಾಜ್ಯೋತ್ಸವ ಆಚರಣೆಯ ಸಂಭ್ರಮವಾಗಿದ್ದು, ವಿವಿಧೆಡೆ ರಾಷ್ಟ್ರಧ್ವಜದ ಧ್ವಜಾರೋಹಣ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿದವು.






ಗಣರಾಜ್ಯೋತ್ಸವದ ಈ ಸಂಭ್ರಮದ ನಡುವೆ ಬಿ.ಸಿರೋಡಿನಲ್ಲಿ 195 ಅಡಿ ಎತ್ತರದಲ್ಲಿ 18 x 32 ಗಾತ್ರದ ರಾಷ್ಟ್ರಧ್ವಜ ಬಾನೆತ್ತರದಲ್ಲಿ ಹಾರಾಡಿ ಎಲ್ಲರ ಗಮನ ಸೆಳೆದಿದೆ.
ಬಿ.ಸಿರೋಡಿನ ಶ್ರೀನಾಥ ಪ್ರಭು ಮಾಲಕತ್ವದ ಗಜಲಕ್ಷ್ಮೀ ಕ್ರೇನ್ಸ್ ವತಿಯಿಂದ ಮಿನಿ ವಿಧಾನಸೌಧ ಮುಂಭಾಗದಲ್ಲಿ ಸುಮಾರು 195 ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಬಾನೆತ್ತರದಲ್ಲಿ ಹಾರಾಡಿದೆ.