ಉಡುಪಿ ಜು07: ಕರಾವಳಿಯ ಶಾಸಕರಿಗೆ ಸಾಮಾನ್ಯ ಪರಿಜ್ಞಾನವಿಲ್ಲದೇ ಇರುವುದರಿಂದ, ಸಮ್ಮಿಶ್ರ ಸರಕಾರದ ಬಜೆಟ್ ಕುರಿತು ಅಸಮಧಾನ ವ್ಯಕ್ತಪಡಿಸಿದ್ದಾರೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಭಿಪ್ರಾಯಪಟ್ಟಿದ್ದಾರೆ.
ಕೇವಲ ಪ್ರಚಾರಕ್ಕಾಗಿ ಕರಾವಳಿಯ ಶಾಸಕರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಾಲ್ಕು ವರ್ಷಗಳಲ್ಲಿ ಮೋದಿ ಸರ್ಕಾರ ಜನತೆಗೆ ಏನು ಕೊಡುಗೆ ನೀಡಿದೆ...? ಉಡುಪಿ ಜಿಲ್ಲೆಗೆ ಮೋದಿ ಯಾವುದೇ ರೀತಿಯ ದೊಡ್ಡ ಕೊಡುಗೆ ನೀಡಿಲ್ಲ. ಹೀಗಾಗಿ ಕರಾವಳಿ ಶಾಸಕರಿಗೆ ರಾಜ್ಯದ ಬಜೆಟ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ತಿಳಿಸಿದ್ದಾರೆ.
ಬ್ರಾಹ್ಮಣ ಅಭಿವೃದ್ದಿ ಮಂಡಳಿ ರಚಿಸಿ ಸಿಎಂ ಕುಮಾರಸ್ವಾಮಿ ಬ್ರಾಹ್ಮಣರಿಗೆ 25 ಕೋಟಿ ರೂ. ನೀಡಿದ್ದಾರೆ. ಹಿಂದುಳಿದ ಮಠಗಳಿಗೂ ಸಿಎಂ ವಿಶೇಷ ಅನುದಾನ ನೀಡಿದ್ದಾರೆ. ಅವರ ಕಾರ್ಯ ಮೆಚ್ಚುವಂತಹದ್ದು ಎಂದು ಶ್ಲಾಘಿಸಿದರು.
ಜನರಿಗೆ 7 ಕೆಜಿ ತೂಕವನ್ನು ಹೊತ್ತುಕೊಂಡು ಹೋಗಲು ಸಮಸ್ಯೆಯಾಗುತ್ತದೆ. ಈ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಈ ಕಾರಣದಿಂದ ಸರ್ಕಾರ ಈ ಬಾರಿ ಜನರಿಗೆ 5 ಕೆಜಿ ಅಕ್ಕಿ ಮಾತ್ರ ನೀಡಲು ಮುಂದಾಗಿದೆ ಎಂದು ತಿಳಿಸಿದ್ದಾರೆ.