ಮಂಜೇಶ್ವರ, ಜ.28 (DaijiworldNews/MB) : ಹಲವು ಪ್ರಕರಣಗಳಲ್ಲಿ ಶಾಮೀಲಾಗಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.

ಅಕ್ರಮ ಗಾಂಜಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಜೇಶ್ವರ ಕುಂಜತ್ತೂರಿನ ಮುಹಮ್ಮದ್ ಫತಿಮುದ್ದೀನ್(24), ಮಂಜೇಶ್ವರ ಉದ್ಯಾವರದ ಅಹಮ್ಮದ್ ಕೌಂಪೌಂಡ್, ಕುಟುಂಬ ನ್ಯಾಯಾಲಯ ವಾರೆಂಟ್ ಹೊರಡಿಸಿದ್ದ ಮಂಜೇಶ್ವರ ಬುದ್ರಿಯದ ಕೃಷ್ಣ (43), ಕೊಲೆ ಪ್ರಕರಣವೊಂದರ ಆರೋಪಿ ಕುಂಜತ್ತೂರು ಮಾಡ ನಿವಾಸಿ ಸೆನೋಹರ್ (23), ಶಸ್ತ್ರ ಕಾಯ್ದೆ ಪ್ರಕರಣದ ಆರೋಪಿ ಬಾಯಾರ್ ಪದವಿನ ಅಬೂಬಕ್ಕರ್ ಸಿದ್ದೀಕ್(28) ಬಂಧಿತ ಆರೋಪಿಗಳು.
ಆರೋಪಿಗಳ ಸುಳಿವು ಲಭಿಸಿದ ಹಿನ್ನಲೆಯಲ್ಲಿ ಬುಧವಾರ ಮುಂಜಾನೆ ಕಾರ್ಯಾಚರಣೆ ನಡೆಸಿದ ಡಿವೈಎಸ್ಪಿ ನೇತೃತ್ವದ ತಂಡವು ನಾಲ್ವರನ್ನು ಬಂಧಿಸಿದೆ.