ಮಂಗಳೂರು, ಜ.28 (DaijiworldNews/PY): ಮೆಸೊಜೊಯಿಕ್ ಅವಧಿಯಲ್ಲಿ ಡೈನೋಸಾರ್ಗಳು ಸುಮಾರು 245 ಹಾಗೂ 66 ದಶಲಕ್ಷ ವರ್ಷಗಳ ಹಿಂದೆ ವಾಸಿಸುತ್ತಿದ್ದವು.






ಮೊದಲ ಆಧುನಿಕ ಮಾನವ ಕಾಣಿಸಕೊಳ್ಳುವ ಮುನ್ನ ಡೈನೋಸಾರ್ಗಳು ವಾಸಿಸುತ್ತಿದ್ದವು. ನಗರದ ಸಿಟಿ ಸೆಂಟರ್ ಮಾಲ್ನಲ್ಲಿ ಚಳಿಗಾಲದ ಹಿತಾನುಭವದೊಂದಿಗೆ ವಿಂಟರ್ ಡೈನೋಸಾರ್ಸ್ ವರ್ಲ್ಡ್ ಪ್ರಾಜೆಕ್ಟ್ ಅನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶವಿದೆ.
ಡೈನೋಸಾರ್ಗಳು ಹಲ್ಲು, ಕಣ್ಣು, ಬಾಲ ಹಾಗೂ ಕುತ್ತಿಗೆಯ ಚಲನೆಯೊಂದಿಗೆ ಶಬ್ದವನ್ನು ಹೊಂದಿರುವ ಮುಖೇನ ನೈಜತೆಯ ಅನುಭವವನ್ನು ನೀಡಲಿದೆ. 18 ಅಡಿಗಳಿಂದ 4 ಅಡಿಗಳವರೆಗೆ ಈ ಡೈನೋಸಾರ್ಗಳ ಪ್ರತಿಕೃತಿಯಿದ್ದು, ಬೃಹದಾಕಾರದ ಡೈನೋಸಾರ್ಗಳು 18 ಅಡಿ ಮತ್ತು 15 ಅಡಿಯದ್ದಾಗಿರುತ್ತದೆ. ಇದು ಪ್ರೇಕ್ಷಕರಿಗೆ ಡೈನೋಸಾರ್ ಜಗತ್ತಿನ ಅನುಭವವನ್ನು ನೀಡಲಿದ್ದು, ಮಕ್ಕಳಿಗೆ ಮಾತ್ರವಲ್ಲದೇ, ಎಲ್ಲಾ ವಯಸ್ಸಿನವರನ್ನು ಕೂಡಾ ಆಕರ್ಷಿಸಲಿದೆ.
ಡೈನೋಸಾರ್ ವರ್ಲ್ಡ್ ಎಕ್ಸ್ಪೆರಿಮೆಂಟಲ್ ಪ್ರಾಜೆಕ್ಟ್ ಅನ್ನು ಅಬುದಾಬಿಯ ಅಲ್ ವಹದಾ ಮಾಲ್, ಭಾರತದ ನೊಯ್ಡ್, ದೆಹಲಿಯ ಡಿಎಲ್ಎಫ್ ಮಾಲ್ ಹಾಗೂ ಮುಂಬೈ ಕುರ್ಲಾದ ಫಿಯೋನಿಕ್ಸ್ ಮಾಲ್ನಲ್ಲಿ ಪ್ರದರ್ಶಿಸಲಾಗುತ್ತಿದೆ. ಇದೀಗ ಮಂಗಳೂರಿನ ಸಿಟಿ ಸೆಂಟರ್ ಮಾಲ್ನಲ್ಲಿ ಕೂಡಾ ಡೈನೋಸಾರ್ ವರ್ಲ್ಡ್ ಎಕ್ಸ್ಪೆರಿಮೆಂಟಲ್ ಪ್ರಾಜೆಕ್ಟ್ ಅನ್ನು ಪ್ರದರ್ಶಿಸಲಾಗುತ್ತಿದೆ.
ಸಿಟಿ ಸೆಂಟರ್ ಮಾಲ್ನ ಕ್ರೈಸಿಸ್ ಮ್ಯಾನೇಜರ್ ಹರೀಶ್ ಶೆಟ್ಟಿ, ಜನರಲ್ ಮ್ಯಾನೇಜರ್ ಸೌಮ್ಯ, ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎಂ. ಸವೂದ್ ಉಪಸ್ಥಿತರಿದ್ದರು.