ಮಂಗಳೂರು, ಜು07: ರಾಜ್ಯದಲ್ಲಿ ಇನ್ನೂ ಕೂಡ ಬಿಜೆಪಿ ಅಧಿಕಾರ ಹಿಡಿಯುವ ಆಸೆಯಲ್ಲಿದೆ. ಆದರೆ ಆ ಆಸೆಯನ್ನು ಬಿಜೆಪಿ ಶಾಸಕರು, ನಾಯಕರು ಕೈಬಿಡಲಿ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಹೇಳಿದ್ದಾರೆ.
ಮಂಗಳೂರು ಎಂ.ಎಲ್.ಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು, ಬಿಜೆಪಿ ಇನ್ನೂ ಕೂಡ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಆಸೆಯಲ್ಲಿದೆ. ಆದರೆ ಬಿಜೆಪಿ ಅಧಿಕಾರಕ್ಕೆ ಏರಲು ಸಾಧ್ಯವಿಲ್ಲ. ಅಧಿಕಾರ ಪಡೆದುಕೊಳ್ಳುವ ಆಸೆಯಿಂದ ರಾಜ್ಯ ಸರಕಾರ ಮಂಡಿಸಿದ ಬಜೆಟ್ ರಾಜ್ಯದ ಬಜೆಟ್ ಅಲ್ಲ ಎಂದು ಬಿಜೆಪಿಯ ನಾಯಕರು ಹೇಳಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರು ಇನ್ನೂ ಐದು ವರ್ಷಗಳ ಕಾಲ ವಿರೋಧ ಪಕ್ಷದಲ್ಲಿಯೇ ಇರಬೇಕು. ಈ ಬಾರಿ ಸಿಎಂ ಮಂಡಿಸಿದ ಬಜೆಟ್ನಲ್ಲಿ ನಮಗೆ, ನಮ್ಮ ಜಿಲ್ಲೆಗೆ ಏನು ನೀಡಿಲ್ಲ ಎಂದು ಶಾಸಕರು ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ದಕ್ಷಿಣ ಕನ್ನಡ ಜಿಲ್ಲೆಗೆ ಈ ಹಿಂದಿನ ಬಜೆಟ್ ಎಲ್ಲಾ ರೀತಿಯ ವ್ಯವಸ್ಥೆಯನ್ನು ನೀಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಾರಿಯ ಬಜೆಟ್ನಲ್ಲಿ ಹೆಚ್ಚುವರಿ ಯೋಜನೆ ನೀಡಿಲ್ಲ. ಅದನ್ನು ಮಾತನಾಡಿ ಸರಿಪಡಿಸಲಿ. ಅದನ್ನು ಬಿಟ್ಟು ಈ ಸರಕಾರ ದಕ್ಷಿಣ ಕನ್ನಡ ಜಿಲ್ಲೆಗೆ ಏನು ನೀಡಿಲ್ಲ ಎಂದು ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.