ಉಡುಪಿ, ಜ.29 (DaijiworldNews/PY): ರೈತ ಕಾರ್ಮಿಕ ಜಾಥ ಇಂದು ಉಡುಪಿಗೆ ಆಗಮಿಸಿದ್ದು, ಉಡುಪಿಯ ಸಾಲಿಗ್ರಾಮ, ಬ್ರಹ್ಮವರ, ಸಂತೆಕಟ್ಟೆ ಹಾಗೂ ಉಡುಪಿಯ ಹಲವು ಭಾಗಗಳಲ್ಲಿ ಸಭೆ ನಡೆಸಿ ಗುರುವಾರ ಸಂಜೆ ಉಡುಪಿಯ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಬಹಿರಂಗ ಸಭೆ ನಡೆಸಲಾಯಿತು.


ಸಿಐಟಿಯು ನ ರಾಜ್ಯ ಉಪಾಧ್ಯಕ್ಷ ರಾದ ವಸಂತ ಆಚಾರಿ ಸಭೆಯನ್ನು ಉದ್ಘಾಟಿಸಿದರು.
ಸಿಐಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ಜಿಲ್ಲಾ ಮುಖಂಡರಾದ ವೆಂಕಟೇಶ ಕೋಣಿ, ಶಶಿಧರ್ ಗೋಲ್ಲ, ಶೇಖರ್ ಬಂಗೇರ, ಬಿಸಿಯೂಟ ನೌಕರರ ಸಂಘ ದ ಕಾರ್ಯದರ್ಶಿ ಕಮಲ, ಸಿಐಟಿಯು ಉಡುಪಿ ತಾಲೂಕು ಅಧ್ಯಕ್ಷ ರಾಮ ಕಾರ್ಕಡ, ಪ್ರಧಾನ ಕಾರ್ಯದರ್ಶಿ ಕವಿರಾಜ್. ಎಸ್, ಮೋಹನ್, ವಾಮನ ಪೂಜಾರಿ, ದಯಾನಂದ ಕೋಟ್ಯಾನ್, ವಿದ್ಯರಾಜ್ ಉಪಸ್ಥಿತರಿದ್ದರು.