ಮಂಜೇಶ್ವರ,ಜ.29 (DaijiworldNews/HR): ಬಂಡವಾಳ ಶಾಹಿಗಳಿಗೆ ದೇಶವನ್ನು ಒತ್ತೆ ಇಡುವ ಮೂಲಕ ಕೇಂದ್ರ ಸರಕಾರ ಕೃಷಿಕರು ಮತ್ತು ಕಾರ್ಮಿಕರ ಬದುಕನ್ನು ಬೀದಿಗೆ ತಂದಿರುವುದಾಗಿ ಸಿಐಟಿಯು ಕಾಸರಗೋಡು ಜಿಲ್ಲಾಧ್ಯಕ್ಷ ವಿ.ಪಿ.ಪಿ ಮುಸ್ತಫಾ ಹೇಳಿದ್ದಾರೆ.



ಸಿಐಟಿಯು ರಾಷ್ಟ್ರೀಯ ಪ್ರತಿಭಟನೆಯ ಅಂಗವಾಗಿ ಸಿಐಟಿಯು ಮಂಜೇಶ್ವರ ಏರಿಯಾ ಸಮಿತಿ ವತಿಯಿಂದ ನಡೆದ ಕಾರ್ಮಿಕ ಸಂಗಮವನ್ನು ಉದ್ಘಾಟಿಸಿ ಹೊಸಂಗಡಿಯಲ್ಲಿ ಮಾತನಾಡಿದ ಅವರು,"ಕೇಂದ್ರ ಸರಕಾರ ಕೃಷಿಕರು ಮತ್ತು ಕಾರ್ಮಿಕರ ಬದುಕನ್ನು ಬೀದಿಗೆ ತಂದಿದೆ" ಎಂದು ಹೇಳಿದ್ದಾರೆ.
ಪ್ರಶಾಂತ್ ಕನಿಲ ಅಧ್ಯಕ್ಷತೆ ವಹಿಸಿದ್ದರು. ಎಐಕೆಎಸ್ ರಾಜ್ಯ ಸಮಿತಿ ಸದಸ್ಯ ಕೆ.ಆರ್ ಜಯಾನಂದ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷೆ ಬೇಬಿ ಶೆಟ್ಟಿ , ಕಮಲಾಕ್ಷ ಕನಿಲ, ಎಂ.ಕೆ ಆಶೀರ್ ಮೊದಲಾದವರು ಉಪಸ್ಥಿತರಿದ್ದರು.