ಕಾಸರಗೋಡು, ಜ.29 (DaijiworldNews/HR): ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರಂತರ ಕಳವು ಪ್ರಕರಣಗಳು ನಡೆಯುತ್ತಿದ್ದು, ಕುಂಜತ್ತೂರು ತೂಮಿನಾಡು ಎಂಬಲ್ಲಿ ಹೋಟೆಲ್ ಮತ್ತು ಬೇಕರಿಯೊಂದಕ್ಕೆ ಕಳ್ಳನೋರ್ವ ನುಗ್ಗಿ ತಡಕಾಡುತ್ತಿತುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.



ಗಾಜು ಒಡೆದು ಒಳನುಗ್ಗಿರುವ ಕಳ್ಳ ಹಣಕ್ಕಾಗಿ ಹುಡುಕಾಟ ನಡೆಸಿದ್ದು, ಅದಕ್ಕೆ ಹೊಂದಿಕೊಂಡಿರುವ ಬೇಕರಿಗೂ ನುಗ್ಗಿ ಕ್ಯಾಶ್ ಡ್ರವರ್ನಲ್ಲಿ ಹಣಕ್ಕಾಗಿ ಹುಡುಕಾಟ ನಡೆಸಿದ್ದಾನೆ.
ಇನ್ನು ಕೆಲ ದಿನಗಳ ಹಿಂದೆ ಉಪ್ಪಳ ಪರಿಸರದಲ್ಲೂ ಕಳ್ಳತನ ನಡೆಸಿದ ಘಟನೆ ನಡೆದಿತ್ತು. ಈ ದೃಶ್ಯಗಳು ಕೂಡ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಳವು ಹೆಚ್ಚುತ್ತಿರುವುದು ವರ್ತಕರಲ್ಲಿ ಭಯದ ವಾತಾವರಣ ಮೂಡಿಸಿದೆ ಎನ್ನಲಾಗಿದೆ.