ಮಂಗಳೂರು, ಜ.29 (DaijiworldNews/PY): ಇಲ್ಲಿನ ಹಳೆಯಂಗಡಿ ಸಮೀಪದ ತೋಕೂರು ಸರಕಾರಿ ಶಾಲೆಯ ಬಳಿಯಲ್ಲಿ ಜ.28ರ ಗುರುವಾರದಂದು ಎರಡು ಬೈಕ್ಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿದ್ದು, ಈ ವೇಳೆ ಒಂದು ಬೈಕಿನ ಸವಾರ ಖಾಸಗಿ ಬಸ್ನ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.


ಮೃತರನ್ನು ಮೂಡುಬಿದಿರೆಯ ಮೋಕ್ಷಿತ್ (19) ಎಂದು ಗುರುತಿಸಲಾಗಿದೆ. ಇನ್ನೋರ್ವ ಬೈಕ್ ಸವಾರ ಬಸವರಾಜ್ ಅವರು ಮುಕ್ಕಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ನಡೆದ ಸಂದರ್ಭ ಖಾಸಗಿ ಬಸ್ ಹಳೆಯಂಗಡಿಯಿಂದ ಕಿನ್ನಿಗೋಳಿಗೆ ತೆರಳುತ್ತಿತ್ತು.
ಘಟನೆಯ ಬಗ್ಗೆ ಸುರತ್ಕಲ್ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.