ಮಂಗಳೂರು, ಜ.29 (DaijiworldNews/HR): ನಕಲಿ ಚಿನ್ನವನ್ನು ಅಡವಿಟ್ಟು ಸಹಕಾರಿ ಸಂಸ್ಥೆಗಳಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಮೂರು ಪೊಲೀಸ್ ಠಾಣೆಗಳಲ್ಲಿ ಆರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಮಂಜನಾಡಿ ಬಳಿಯ ಕಲ್ಕತ್ತಾದ ಕೆ.ಸಾದಿಕ್ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿಯವರೆಗೆ ಬೆಳಕಿಗೆ ಬಂದಿರುವ ನಕಲಿ ಚಿನ್ನದ ಪ್ರಕರಣಗಳಲ್ಲಿ ಎಲ್ಲವೂ ಕೂಡ ಬಳೆಗಳಾಗಿ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಳೆಗಳನ್ನು ಮೂಲ ಚಿನ್ನದಂತೆ ಕಾಣಲು ಮೂರರಿಂದ ನಾಲ್ಕು ಚಿನ್ನದ ಲೇಪನಗಳನ್ನು ನೀಡಲಾಗುತ್ತದೆ.
ಮುಡಿಪುವಿನಲ್ಲಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಸಾದಿಕ್ ಅಡವಿಟ್ಟ ಚಿನ್ನವನ್ನು ಇತರರೊಂದಿಗೆ ಪರಿಶೀಲಿಸಿದಾಗ ಮೋಸ ಬೆಳಕಿಗೆ ಬಂದಿದ್ದು, ಸಹಿ ಬಾಕಿ ಇದೆ ಎಂದು ಸಿಬ್ಬಂದಿ ಕೂಡಲೇ ಸಾದಿಕ್ಗೆ ಕರೆ ಮಾಡಿ ಅಲ್ಲಿಗೆ ಬರುವಂತೆ ಹೇಳಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಂಸ್ಥೆಗಳ ಮುಖ್ಯಸ್ಥರು ಜನವರಿ 28 ರಂದು ಸಂಜೆ ನಗರ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ಅವರನ್ನು ಭೇಟಿಯಾಗಿ ವಂಚನೆಯ ವಿವರಗಳನ್ನು ನೀಡಿದ್ದಾರೆ.