ಮಂಗಳೂರು, ಜ.29 (DaijiworldNews/HR): 2020ರ ಡಿಸೆಂಬರ್ 12 ರಂದು ನಗರದ ನ್ಯೂ ಚಿತ್ರ ಜಂಕ್ಷನ್ ಬಳಿ ಕರ್ತವ್ಯ ನಿರತ ಬಂದರು ಪೊಲೀಸ್ ಠಾಣೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬೋಳಾರ್ ನಿವಾಸಿ ಇಬ್ರಾಹಿಂ ಶಾಕಿರ್(19), ಸಜಿಪನಡು ನಿವಾಸಿ ಅಕ್ಬರ್ (30), ಕುದ್ರೋಳಿಯ ಮಹಮ್ಮದ್ ಹನೀಫ್ ಯಾನೆ ಕರ್ಚಿ ಹನೀಫ್ (32), ಎಂದು ಗುರುತಿಸಲಾಗಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ನಗರ ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಮತ್ತು ಉಪ ಪೊಲೀಸ್ ಆಯುಕ್ತರಾದ ಹರಿರಾಮ್ ಶಂಕರ್ ಮತ್ತು ವಿನಯ್ ಗೌಂಕರ್ ಅವರ ಮಾರ್ಗದರ್ಶನದಲ್ಲಿ ಸಾವಿತ್ರ ತೇಜ ಪಿಡಿ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ನಗರ (ಉತ್ತರ) ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗೋವಿಂದರಾಜು, ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಇತರ ಸಿಬ್ಬಂದಿಯಿಂದ ಪೊಲೀಸ್ ತಂಡವು ಬಂಧಿಸುವ ಕಾರ್ಯದಲ್ಲಿ ಸಹಕಾರ ನೀಡಿದೆ.