ಮಂಗಳೂರು, ಜ.29 (DaijiworldNews/HR): ನಗರದ ಲಾಲ್ಭಾಗ್ ಸಮೀಪ ನಿಲ್ಲಿಸಲಾಗಿದ್ದ ಬುಲೆಟ್ ಬೈಕ್ ಅನ್ನು ಟ್ರಾಫಿಕ್ ಪೊಲೀಸರು ಟೋಯಿಂಗ್ ಮಾಡಿದ್ದು, ಟೋಯಿಂಗ್ ಮಾಡುವಾಗ ಬುಲೆಟ್ ಬೈಕ್ಗೆ ಹಾನಿಯಾಗಿದೆ ಎಂದು ವಾಹನ ಮಾಲಕ ಆರೋಪಿಸಿದ್ದಾರೆ.

ಸುದೇಶ್ ಅವರ ಮಾಲಕತ್ವದ ಬುಲೆಟ್ ಬೈಕ್ ಅನ್ನು ಟ್ರಾಫಿಕ್ ಪೊಲೀಸರು ಟೋಯಿಂಗ್ ಮಾಡಿದ್ದು, ದಂಡದ ಮೊತ್ತ ಪಾವತಿಸಿದ ಬಳಿಕವೂ ಹಾನಿ ಸರಿಪಡಿಸಲು ಹಿಂದೇಟು ಹಾಕಿದ್ದಾರೆಂದು ಪೊಲೀಸರ ವಿರುದ್ಧ ಬೈಕ್ ಮಾಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಕುರಿತು ಸುದೇಶ್ ಅವರು ಪೊಲೀಸರಲ್ಲಿ ಪ್ರಶ್ನಿಸುವ ವೀಡಿಯೊವೊಂದನ್ನು ಮಾಡಿದ್ದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.