ಕಾಸರಗೋಡು, ಜ.29 (DaijiworldNews/PY): ರಾಷ್ಟ್ರೀಯ ಹೆದ್ದಾರಿಯ ಕರಿವೆಳ್ಳೂರು ಪಾಲಕುನ್ನು ಎಂಬಲ್ಲಿ ಲಾರಿ ಮತ್ತು ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ನಡೆದಿದೆ.

ವೆಳ್ಳಾಚ್ಚಾಲ್ನ ಮಿಥುನ್ (22) ಮೃತಪಟ್ಟ ಯುವಕ.
ಹೋಟೆಲ್ನಿಂದ ಆಹಾರ ಸೇವಿಸಿ ಮನೆಗೆ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ಗಂಭೀರ ಗಾಯಗೊಂಡ ಈತನನ್ನು ಚೆರ್ವತ್ತೂರಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದರು ಜೀವ ಉಳಿಸಲಾಗಲಿಲ್ಲ.
ಘಟನೆಯ ಬಗ್ಗೆ ಹೊಸದುರ್ಗ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.