ಕಾರ್ಕಳ, ಜ.30 (DaijiworldNews/PY): ವಿದ್ಯುತ್ ಕಂಬವೊಂದು ಮುರಿದುಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ಸು ಚಾಲಕನ ವಿರುದ್ಧ ಕಾರ್ಕಳದ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಜನವರಿ 25ರಂದು ಈ ಘಟನೆ ಸಂಭವಿಸಿದೆ.
ಸಾಲ್ಮರ್ ಎಂಬಲ್ಲಿ ಹಾದು ಹೋಗಿರುವ ರಸ್ತೆಯ ಮಧ್ಯೆ ಇರುವ ರಸ್ತೆ ವಿಭಜಕದಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಕಂಬಕ್ಕೆ ಬಸ್ಸೊಂದು ಡಿಕ್ಕಿ ಹೊಡೆದಿತ್ತು. ಅದರಿಂದಾಗಿ ರೂ.51 ಸಾವಿರ ನಷ್ಟ ಉಂಟಾಗಿರುವ ಕುರಿತು ಕಾರ್ಕಳ ಪುರಸಭಾ ಮುಖ್ಯಾಧಿಕಾರಿ ನಗರ ಠಾಣೆಗೆ ದೂರು ಸಲ್ಲಿಸಿದ್ದರು.