ಬೆಂಗಳೂರು, ಜು 08 : ಗಣ್ಯ ವ್ಯಕ್ತಿಗಳ ಸಂಚಾರ ಸಂದರ್ಭದಲ್ಲಿ ಟ್ರಾಫಿಕ್ ಫ್ರೀ ಮಾಡಿಕೊಡಲು ಅಂಬುಲೆನ್ಸ್ ತಡೆದು ನಿಲ್ಲಿಸಿದಂತೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಮೊದಲು ಆಂಬ್ಯುಲೆನ್ಸ್ ಹೋಗಲು ಜಾಗ ಮಾಡಿಕೊಡಿ, ಶಿಷ್ಟಾಚಾರವನ್ನು ಬದಿಗೊತ್ತಿ. ಈ ನಿಯಮ ಎಲ್ಲಾ ಜಿಲ್ಲೆಗಳಲ್ಲೂ ಜಾರಿಗೆ ಬರಬೇಕು ಎಂದು ಸೂಚನೆ ನೀಡಿದ್ದಾರೆ. ಅವರು ಬರೆದ ಪತ್ರದಲ್ಲಿ, ಬೆಂಗಳೂರು ಸೇರಿದಂತೆ ರಾಜ್ಯದ್ಯಾಂತ ನಾನು ಸಂಚರಿಸುವ ಮಾರ್ಗದಲ್ಲಿ ನನಗೆ ಶಿಷ್ಟಾಚಾರದಂತೆ ಟ್ರಾಫಿಕ್ ಫ್ರಿ ಸಂಚಾರ ಮಾಡುವ ಸಲುವಾಗಿ ಕೆಲವು ಬಾರಿ ಅಂಬುಲೆನ್ಸ್ ವಾಹನಗಳನ್ನು ತಡೆದು ನಿಲ್ಲಿಸಿರುವುದನ್ನು ನಾನು ಗಮನಿಸಿರುತ್ತೇನೆ. ಹೀಗಾಗಿ ದಯವಿಟ್ಟುನನಗೆ ಮತ್ತು ಇನ್ನಿತರ ವಿಐಪಿಗಳಿಗೆ ನೀಡಿರುವ ಶಿಷ್ಟಾಚಾರವನ್ನು ಬದಿಗೊತ್ತಿ, ಗಣ್ಯವ್ಯಕ್ತಿಗಳ ಸಂಚಾರ ಸಂದರ್ಭದಲ್ಲಿ ಆಂಬುಲೆನ್ಸ್ ವಾಹನಗಳು ಮುಕ್ತವಾಗಿ ಯಾವುದೇ ರೀತಿಯ ತೊಂದರೆಯಾಗದಂತೆ ಸಂಚರಿಸಲು ಅಗತ್ಯಕ್ರಮ ವಹಿಸಲು ಜಿ. ಪರಮೇಶ್ವರ್ ಅವರು ಪತ್ರದಲ್ಲಿ ಸೂಚಿಸಿದ್ದಾರೆ.