ಕಾಸರಗೋಡು, ಜ.31 (DaijiworldNews/HR): ಹೊಳೆಯಲ್ಲಿ ಮುಳುಗಿ ಸಹೋದರರಿಬ್ಬರು ಮೃತಪಟ್ಟ ಘಟನೆ ಇಚ್ಲಂಗೋಡು ಹೊಳೆಯಲ್ಲಿ ರವಿವಾರ ಸಂಜೆ ನಡೆದಿದೆ.


ಮೃತಪಟ್ಟವರನ್ನು ಬಂಬ್ರಾಣ ಬತ್ತೇರಿಯ ಷರೀಫ್ ಎಂಬವರ ಮಕ್ಕಳಾದ ಶಂಸೀನ್ (12), ಶದಾದ್ (8) ಎಂದು ಗುರುತಿಸಲಾಗಿದೆ.
ಜೊತೆಗಿದ್ದ ಮಕ್ಕಳು ಬೊಬ್ಬೆ ಹಾಕಿದಾಗ ಧಾವಿಸಿ ಬಂದ ಪರಿಸರವಾಸಿಗಳು ಹಾಗೂ ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿಗಳು ಹೊಳೆಯಲ್ಲಿ ಶೋಧ ನಡೆಸಿ ಹೊರ ತೆಗೆದರೂ ಇಬ್ಬರು ಮೃತಪಟ್ಟಿದ್ದರು.
ಪರಿಸರದ ಇತರ ಮಕ್ಕಳ ಜೊತೆ ಆಣೆಕಟ್ಟು ಸಮೀಪ ಇಬ್ಬರು ಸ್ನಾನಕ್ಕಿಳಿದಿದ್ದು, ಈ ಸಂದರ್ಭದಲ್ಲಿ ಅವಘಡ ನಡೆದಿದೆ ಎನ್ನಲಾಗಿದೆ.
ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.