ಬೆಳ್ತಂಗಡಿ, ಫೆ.01 (DaijiworldNews/HR): ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿಜಯಶಾಲಿಯಾಗಿ ಹೊರಬಂದ ಬೆಳ್ತಂಗಡಿ ಮಂಡಲದ ಬಿಜೆಪಿ ಅಭ್ಯರ್ಥಿಗಳನ್ನು ಅಭಿನಂದಿಸಲು ಜನವರಿ 31 ರಂದು ಉಜಿರೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಕೆ.ಎಸ್.ಈಶ್ವರಪ್ಪ ಅವರು ಭಾಗವಹಿಸಿದ್ದರು.

ಬಳಿಕ ಸಭೆಯಲ್ಲಿ ಮಾತನಾಡಿದ ಅವರು, ಗೋ ಕಳ್ಳತನವನ್ನು ಮಾಡುವವರ ಮತ್ತು ಅವುಗಳನ್ನು ಕೊಲ್ಲುವವರ ಕೈ ಕಾಲುಗಳನ್ನು ಕತ್ತರಿಸುತ್ತೇವೆ. ಗೋ ಕಳ್ಳರು ನಿಮ್ಮ ಹಳ್ಳಿಗಳಿಗೆ ಬಂದರೆ, ನೀವು ಕಾನೂನುಬದ್ಧ ನಿಬಂಧನೆಗಳನ್ನು ಅನುಸರಿಸಿ ಅವರ ಕೈಕಾಲುಗಳನ್ನು ಕತ್ತರಿಸಿ" ಎಂದರು.
ಇನ್ನು ನೂತನವಾಗಿ ಚುನಾಯಿತರಾದ ಗ್ರಾಮ ಪಂಚಾಯತ್ ಸದಸ್ಯರಿಗೆ ಸರ್ಕಾರವು ಆಯೋಜಿಸುತ್ತಿರುವ ವಿವಿಧ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ,, ಅವರ ಜ್ಞಾನವನ್ನು ಹೆಚ್ಚಿಸಿಕೊಂಡು ಅವರ ವಾರ್ಡ್ಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಅವರು ಸಲಹೆ ನೀಡಿದ್ದಾರೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ, "ಬಿಜೆಪಿ ಕಾರ್ಯಕರ್ತರು ಎಂದಿಗೂ ಇತರರೊಂದಿಗೆ ಘರ್ಷಣೆಗೆ ಹೋಗುವುದಿಲ್ಲ. ಆದರೆ ಈ ಕಾರ್ಯಕರ್ತರು ಹಿಂದೂ ಧರ್ಮದ ಸಲುವಾಗಿ, ಲವ್ ಜಿಹಾದ್ನೊಂದಿಗೆ ಭಾಗಿಯಾಗಿರುವವರನ್ನು ಮತ್ತು ಕಾನೂನುಬಾಹಿರವಾಗಿ ಹಸುಗಳನ್ನು ಹತ್ಯೆ ಮಾಡುವ ಜನರ ವಿರಿದ್ಧ ಕಠಿಣ ಕ್ರಮ ಕೈಗೊಳ್ಳಲು ಸಿದ್ಧರಾಗಿದ್ದಾರೆ" ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ, ಎಸ್.ಅಂಗರಾ, ಎಂ.ಎಲ್.ಸಿ ಪ್ರತಾಪ್ ಸಿಂಹ ನಾಯಕ್, ಪಕ್ಷದ ಮುಖಂಡರಾದ ಸುದರ್ಶನ್, ಮೀನಾಕ್ಷಿ ಶಾಂತಿಗೋಡು, ಹರಿಕೃಷ್ಣ ಬಂಟ್ವಾಳ್, ಸುಧೀರ್ ಶೆಟ್ಟಿ, ರಾಮದಾಸ್ ಭಟ್, ಕಸ್ತೂರಿ ಪೂಂಜಾ, ಕೊರಗಪ್ಪ ನಾಯಕ್, ಶಶಿಧರ್ ಕಲ್ಮಂಜ, ಜಯಾನಂದ ಗೌಡ ಹಾಗೂ ಮತ್ತಿತರರು ಉಪಸ್ಥಿತರಿದ್ದರು.