ಮಂಗಳೂರು, ಫೆ.01 (DaijiworldNews/HR): "ಇಬ್ಬರ ನಡುವೆ ಘರ್ಷಣೆ ಸೃಷ್ಟಿಸಲು ಯೋಜಿಸುತ್ತಿರುವಂತೆ ಕಂಡುಬರುವ ನೀ ತಾಂಟ್ರೆ ಬಾ ತಾಂಟ್ ಸಾಮಾಜಿಕ ವೆಬ್ಸೈಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ನಗರ ಪೊಲೀಸ್ ಆಯುಕ್ತ (ಡಿಸಿಪಿ) ಹರಿರಾಮ್ ಶಂಕರ್ ಹೇಳಿದ್ದಾರೆ.

ಈ ಕುರಿತು ಮಾತನಾಡಿ ಅವರು, ಈ ಸಾಮಾಜಿಕ ವೆಬ್ಸೈಟ್ನಲ್ಲಿ ನಕಲಿ ದಾಖಲೆಗಳ ಸಹಾಯದಿಂದ ವಿಡಿಯೋಗಳನ್ನು ಪೋಸ್ಟ್ ಮಾಡಲಾಗುತ್ತಿದ್ದು, ಇದು ವಿಭಿನ್ನ ಗುಂಪುಗಳ ನಡುವೆ ಘರ್ಷಣೆಯಾಗುವುದಕ್ಕಾಗಿ ಮಾಡಲಾಗುತ್ತಿದೆ" ಎಂದರು.
ಈ ನಿಟ್ಟಿನಲ್ಲಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ನಕಲಿ ಪೇಜ್ ರಚಿಸುವ ಮತ್ತು ನಿರ್ವಹಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಸಾಮರಸ್ಯವನ್ನು ಭಂಗಗೊಳಿಸಲು ಪ್ರಯತ್ನಿಸುವ ವಿರುದ್ಧ ಕೂಡ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.