ಜು: ಕುಖ್ಯಾತ ಗ್ಯಾಂಗ್'ಸ್ಟರ್ ಪ್ರೇಮ್ ಪ್ರಕಾಶ್ ಸಿಂಗ್ ಅಲಿಯಾಸ್ ಮುನ್ನಾ ಭಜರಂಗಿಯನ್ನು ಉತ್ತರಪ್ರದೇಶದ ಬಘ್ ಪತ್ ಜಿಲ್ಲಾ ಕಾರಾಗೃಹದಲ್ಲಿ ಹತ್ಯೆಯಾಗಿದೆ ಎಂದು ವರದಿಯಾಗಿದೆ.
ಸೋಮವಾರ ಪಾತಕಿ ಭಜರಂಗಿಯನ್ನು ಕೆಲ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋರ್ಟ್ ಗೆ ಹಾಜರುಪಡಿಸಬೇಕಾಗಿತ್ತು. ಹೀಗಾಗಿ ಬೆಳಗ್ಗೆ 6.30 ರ ಸುಮಾರಿಗೆ ಪೊಲೀಸ್ ವಾಹನದಲ್ಲಿ ಕುಳ್ಳಿರಿಸಬೇಕಾಗಿತ್ತು.ಈ ವೇಳೆ ಜೈಲಿನಲ್ಲಿದ್ದ ಮತ್ತೊಬ್ಬ ಆರೋಪಿ ಸುನೀಲ್ ರಥಿ ಎಂಬಾತ, ಭಜರಂಗಿಯನ್ನು ಗುಂಡು ಹೊಡೆದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಝಾನ್ಸಿ ಜೈಲಿನಲ್ಲಿದ್ದ ಭಜರಂಗಿಯನ್ನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದಷ್ಟೇ ಬಘ್'ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಬಿಜೆಪಿ ಹಿರಿಯ ನಾಯಕ ಕೃಷ್ಣಾನಂದ್ ರೈ ಅವರ ಕೊಲೆ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದ
ಇತ್ತೀಚೆಗಷ್ಟೇ ಭಜರಂಗಿ ಪತ್ನಿ ಸೀಮಾ ಸಿಂಗ್ ಅವರು, ಉತ್ತರಪ್ರದೇಶದ ವಿಶೇಷ ಪೊಲೀಸರು ಜೈಲಿನಲ್ಲಿಯೇ ನನ್ನ ಪತಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆಂಬು ಆರೋಪ ಮಾಡಿದ್ದರು. ಘಟನೆ ಬಗ್ಗೆ ನ್ಯಾಯಂಗ ತನಿಖೆಗೆ ಆದೇಶಿಸಿದ್ದು, ಸದ್ಯ ಜೈಲರ್ ನನ್ನು ಅಮಾನತಿನಲ್ಲಿಡಲಾಗಿದೆ. ಜೈಲಿನ ಸಹ ಕೈದಿಯ ಬಳಿಕ ಗನ್ ಹೇಗೆ ಬಂದಿತ್ತು ಸಿಕ್ಕಿತು ಎಂಬ ಪ್ರಶ್ನೆ ಇದೀಗ ಹಲವು ಅನುಮಾನಗಳಿಗೆ ಏಡೆ ಮಾಡಿಕೊಟ್ಟಿದೆ.