ಉಡುಪಿ, ಫೆ.01 (DaijiworldNews/HR): ಮಲ್ಪೆ ಬಳಿಯ ಪಡುಕೆರೆ ಗ್ರಾಮಸ್ಥರು ಈ ಪ್ರದೇಶದಲ್ಲಿ ಒಂದು ಬ್ಯಾನರ್ ಹಾಕಿದ್ದು, ಪಡುಕೆರೆಗೆ ಮರೀನಾ ನಿರ್ಮಾಣಕ್ಕೆ ಸಂಬಂಧಿಸಿದ ಕೆಲಸಗಳಿಗಾಗಿ ಊರಿನ ಒಳಗೆ ಬರುತ್ತೀರುವುದಾದರೆ ದಯವಿಟ್ಟು ವಾಪಾಸ್ ಹೋಗಿ ಎಂದು ಎಚ್ಚರಿಕೆ ನೀಡಿದ್ದಾರೆ.



ಈ ಹಿಂದೆ ಶಾಸಕರೊಂದಿಗಿನ ನಡೆದ ಸಭೆಯಲ್ಲಿ ನಿರ್ಧಾರ ಮಾಡಿದ್ದ ಪಡುಕೆರೆ ಸರ್ವ ಸಂಸ್ಥೆಗಳ ಒಕ್ಕೂಟ, ಪಡುಕೆರೆಗೆ ಮರೀನಾ ನಿರ್ಮಾಣಕ್ಕೆ ಸಂಬಂಧಿಸಿದ ಕೆಲಸಗಳಿಗಾಗಿ ಊರಿನ ಒಳಗೆ ಬರುತ್ತೀರುವುದಾದರೆ ದಯವಿಟ್ಟು ವಾಪಾಸ್ ಹೋಗಿ, ಮರೀನಾ ನಿರ್ಮಾಣಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಬ್ಯಾನರ್ ಅಳವಡಿಸಿದ್ದಾರೆ.
ಇನ್ನು "ನೀವು ಮರೀನಾ ಬೀಚ್ ನಿರ್ಮಾಣಕ್ಕಾಗಿ ನಮ್ಮ ಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸಿದರೆ, ನಿಮ್ಮೆಲ್ಲರನ್ನೂ ಹಿಂದೆ ಸರಿಯುವಂತೆ ನಾವು ಎಚ್ಚರಿಸುತ್ತೇವೆ. ಯಾವುದೇ ಮರೀನಾ ಸಂಬಂಧಿತ ಕೆಲಸ್ದಕ್ಕಾಗಿ ಹಳ್ಳಿಗೆ ಪ್ರವೇಶಿಸದಂತೆ ನಾವು ಈಗಾಗಲೇ ಸಾಮೂಹಿಕ ಪ್ರಜಾಪ್ರಭುತ್ವ ಪ್ರತಿಕ್ರಿಯೆಯನ್ನು ನೀಡಿದ್ದೇವೆ. ಗ್ರಾಮಸ್ಥರ ಈ ಎಚ್ಚರಿಕೆಯನ್ನು ಮೀರಿ ಊರಿನೊಳಗೆ ಬಂದರೆ, ಮುಂದೆ ನಡೆಯಬಹುದಾದ ಯಾವ ಪ್ರತಿಕ್ರಿಯೆಗಳಿಗೂ ನಾವು ಜವಾಬ್ದಾರರಾಗಿರುವುದಿಲ್ಲ" ಎಂದು ಸರ್ವ ಸಂಸ್ಥೆಗಳ ಒಕ್ಕೂಟ ತಿಳಿಸಿದೆ.
ಮರೀನಾ ಯೋಜನೆಯಿಂದಾಗಿ ಪ್ರಕೃತಿಗೆ ಹಾನಿಯಾಗುತ್ತದೆ ವಿಶೇಷವಾಗಿ ತಮ್ಮ ಮೀನುಗಾರಿಕೆ ವೃತ್ತಿಗೆ ತೊಂದರೆಯಾಗುತ್ತದೆ ಎಂದು ಪಡುಕೆರೆ ಗ್ರಾಮಸ್ಥರು ಮರೀನಾ ಯೋಜನೆಯನ್ನು ವಿರೋಧಿಸುತ್ತಿದ್ದಾರೆ.
ಇನ್ನು ಉಡುಪಿ ಶಾಸಕ ರಘುಪತಿ ಭಟ್ ಅವರು ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಈ ಯೋಜನೆಯನ್ನು ಅನುಮೋದಿಸಲು ಮನವೊಲಿಸಲು ಪ್ರಯತ್ನಿಸಿದರು ವಿಫಲರಾಗಿದ್ದಾರೆ. ಒಟ್ಟಿಗೆ ಸೇರಿರುವ ಪಡುಕೆರೆ ಮಲ್ಪೆ ಸಂಘಟನೆಗಳು ಗ್ರಾಮ ಪ್ರವೇಶದ ಎರಡೂ ಬಾಗಗಳಲ್ಲಿ ಎರಡು ಬ್ಯಾನರ್ಗಳನ್ನು ಹಾಕಲು ನಿರ್ಧರಿಸಿದ್ದು, ಯೋಜನೆಗೆ ಸಂಪರ್ಕ ಹೊಂದಿದ ಜನರಿಗೆ ಗ್ರಾಮಕ್ಕೆ ಪ್ರವೇಶಿಸದಂತೆ ಎಚ್ಚರಿಕೆ ನೀಡಿದ್ದಾರೆ.