ಕಾರ್ಕಳ,ಫೆ.01 (DaijiworldNews/HR): ಕಾರ್ಕಳ ಪುರಸಭೆಯು ಬಿಜೆಪಿಗೆ ಸ್ವಷ್ಟವಾಗಿ ಸರಳ ಬಹುಮತವಿದ್ದರೂ ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವು ಪಕ್ಷೇತರ ಪಾಲಾಗಿದೆ.

ಸ್ಥಾಯೀ ಸಮಿತಿಯ ಅಧ್ಯಕ್ಷರಾಗಿ ಲಕ್ಷ್ಮೀನಾರಾಯಣ ಮಲ್ಯ ಆಯ್ಕೆಗೊಂಡಿದ್ದಾರೆ.
ಕಾಂಗ್ರೆಸ್ನ ಹಿರಿಯ ಸದಸ್ಯ ಅಶ್ಪಕ್ ಅಹಮ್ಮದ್ ಲಕ್ಷ್ಮೀನಾರಾಯಣ ಅವರ ಹೆಸರನ್ನು ಸೂಚಿಸಿದರೆ, ನಳಿನಿ ಆಚಾರ್ಯ ಅನುಮೋದಿಸಿದರು.
ಕಾರ್ಕಳ ಪುರಸಭೆಯಲ್ಲಿ ಒಟ್ಟು 23 ಸ್ಥಾನಗಳಿದ್ದು, ಬಿಜೆಪಿ, ಕಾಂಗ್ರೆಸ್ ತಲಾ 11 ಸ್ಥಾನಗಳಿಸಿದರೆ 1 ಸ್ಥಾನ ಪಕ್ಷೇತರ ಪಾಲಾಗಿತ್ತು. ಪಕ್ಷೇತರ ಅಭ್ಯರ್ಥಿ ಬಿಜೆಪಿಯ ಬಂಡಾಯವಾಗಿ ಸ್ವರ್ಧಾಕಣಕ್ಕೆ ಇಳಿಸಿದ್ದರು.
ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿ ತಟಸ್ಥವಾಗಿ ಉಳಿದರೆ, ಸಂಸದೆ, ಶಾಸಕ ಇವರ ಬೆಂಬಲದೊಂದಿಗೆ ಕಾರ್ಕಳ ಪುರಸಭಾ ಅಡಳಿತ ಬಿಜೆಪಿ ಪಾಲಾಗಿತ್ತು.