ಉಡುಪಿ, ಜು 09 : ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಟೂರಿಸ್ಟ್ ವಾಹನದ ಚಾಲಕರಿಬ್ಬರು ಚಿಕನ್ ಲೆಗ್ ಫೀಸ್ ಗಾಗಿ ಹೊಡೆದಾಡಿಕೊಂಡ ಘಟನೆ ಜು. 07 ರಂದು ಸಂಭವಿಸಿದೆ. ಉತ್ತರ ಕರ್ನಟಕದ ಪ್ರವಾಸ್ತಿಗರನ್ನು ಬಸ್ಸಿನ ಚಾಲಕ ರಾದ ಸುರೇಶ್ ಮತ್ತು ಮಧು ಮಧ್ಯ ಸೇವಿಸಿ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು.
ಉತ್ತರ ಕರ್ನಾಟಕದಿಂದ ಪ್ರವಾಸಿಗರನ್ನು ಕರೆತಂದಿದ್ದ ಬಸ್ಸಿನ ಚಾಲಕ ಸುರೇಸ್, ಮತ್ತು ಮಧು ಮದ್ಯಪಾನ ಮಾಡಿ ಮಠದ ಪಾರ್ಕಿಂಗ್ ಜಾಗದಲ್ಲಿದ್ದ ಹೋಟೆಲ್ನಲ್ಲಿ ಊಟ ಮಾಡುತ್ತಿದ್ದರು. ಈ ವೇಳೆ ಇಬ್ಬರೂ ಬಿರಿಯಾನಿಯ ಲೆಗ್ ಪೀಸ್ ಗಾಗಿ ನಡೆದ ಜಗಳ ಪ್ರಾರಂಭಿಸಿದ್ದು, ಪರಸ್ಪರ ಹೊಡೆದಾಡಿ ಕಿವಿ, ಮುಖ, ಕೈಗೆ ಕಚ್ಚಿಕೊಂಡ ವಿಲಕ್ಷಣ ವರ್ತಿಸಿದ್ದಾರೆ. ಅಷ್ಟೇ ಅಲ್ಲದೇ ಜಗಳದಲ್ಲಿ ಚಾಲಕ ಮಧು ಕಿವಿಯನ್ನು ಮತ್ತೊಬ್ಬ ಚಾಲಕ ಸುರೇಶ ಕಚ್ಚಿ ಹರಿದಿದ್ದಾನೆ. ಪ್ರಕರಣದ ಕುರಿತು ಚಾಲಕ ಮಧು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.