ಕಾಸರಗೋಡು, ಫೆ.02 (DaijiworldNews/PY): ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ನಗರದ ತಳಂಗರೆಯಲ್ಲಿ ನಡೆದಿದೆ.

ತಳಂಗರೆ ಸರಕಾರಿ ಮುಸ್ಲಿಂ ಹೈಸ್ಕೂಲಿನ ಹತ್ತನೇ ತರಗತಿ ವಿದ್ಯಾರ್ಥಿ ಹಾಗೂ ಕೊಲ್ಲಂಗಾನ ನಿವಾಸಿ ಪಿ.ಎಂ.ಜೈನುಲ್ ಆಬಿದ್ (26) ಮೃತಪಟ್ಟ ವಿದ್ಯಾರ್ಥಿ.
ಮಂಗಳವಾರ ಮಧ್ಯಾಹ್ನ ಸಹಪಾಠಿಗಳ ಜೊತೆ ಮಸೀದಿಯ ಕೆರೆಗೆ ಸ್ನಾನಕ್ಕಿಳಿದ ಸಂದರ್ಭ ಈ ಘಟನೆ ನಡೆದಿದೆ.
ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೃತದೇಹವನ್ನು ಮೇಲಕ್ಕೆತ್ತಿದರು.