ಮಂಗಳೂರು, ಫೆ.02 (DaijiworldNews/PY): "ಸಭಾಪತಿಗಳನ್ನು ಅಧಿಕಾರದಿಂದ ಇಳಿಸುವ ಮೂಲಕ ಬಂಟ ಸಮುದಾಯಕ್ಕೆ ಅವಮಾನ ಮಾಡಿದೆ" ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳಿದ್ದಾರೆ.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸಭಾಪತಿ ಸ್ಥಾನದಿಂದ ಇಳಿಸುವ ಯತ್ನ ವಿಚಾರದ ಬಗ್ಗೆ ಮಾತನಾಡಿದ ಅವರು, "ಜಾತ್ಯಾತೀತ ಜನತಾದಳ ಪಕ್ಷ ಬಿಜೆಪಿಯೊಂದಿಗೆ ಸೇರಿ ಜನರಿಗೆ ದ್ರೋಹವೆಸಗುತ್ತಿದೆ. ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಅಧಿಕಾರದಿಂದ ಇಳಿಸುವ ಪ್ರಯತ್ನಕ್ಕೆ ಜಾತ್ಯಾತೀತ ಪಕ್ಷ ಎನ್ನುವ ನಾಮ ಇಟ್ಟ ಪಕ್ಷ ಬಿಜೆಪಿ ಜೊತೆ ಸೇರಿದೆ" ಎಂದು ಆರೋಪಿಸಿದರು.
"ಸಭಾಪತಿಗಳನ್ನು ಅಧಿಕಾರದಿಂದ ಇಳಿಸುವ ಹುನ್ನಾರದ ಮೂಲಕ ಬಂಟ ಸಮುದಾಯಕ್ಕೆ ಅವಮಾನ ಮಾಡಿದೆ. ಜನತಾದಳ ಹಾಗೂ ಬಿಜೆಪಿ ಬಂಟ ಸಮುದಾಯಕ್ಕೆ ವಿಶ್ವಾಸ ದ್ರೋಹ, ಅಪಮಾನ ಮಾಡುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಧಿಕಾರದಲ್ಲಿ ಸಭಾಪತಿಗಳಾಗಿ ಬಿಜೆಪಿಯವರಿದ್ದರು. ಆದರೆ, ಅವರಿಗೆ ಸಮಸ್ಯೆ ಕೊಡುವ ಕಾರ್ಯ ಆಗಿಲ್ಲ. ಇತಿಹಾಸದಲ್ಲೇ ಈ ರೀತಿಯ ವರ್ತನೆ ಮೊದಲ ಬಾರಿ" ಎಂದರು.