ಮಂಗಳೂರು, ಫೆ.03 (DaijiworldNews/MB) : ಉಳ್ಳಾಲದ ರಾಣಿ ಅಬ್ಬಕ್ಕ ವೃತ್ತದ ಬಳಿಯಿರುವ ನರ್ಸಿಂಗ್ ಕಾಲೇಜಿಗೆ ಪರೀಕ್ಷೆ ಬರೆಯಲು ಆಗಮಿಸಿದ 40 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟವ್ ಆಗಿದೆ.


ಆಲಿ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿಗೆ ಪರೀಕ್ಷೆಯನ್ನು ಬರೆಯಲು ಕೇರಳದಿಂದ ಆಗಮಿಸಿದ 40 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟವ್ ಆಗಿದ್ದು ಈ ಹಿನ್ನೆಲೆ ಕಾಲೇಜನ್ನು ಸೀಲ್ಡೌನ್ ಮಾಡುವಂತೆ ಜನವರಿ 3 ರ ಬುಧವಾರ ಅಧಿಕಾರಿಗಳು ಆದೇಶಿಸಿದ್ದಾರೆ.
ಉಳ್ಳಾಲ ನಗರ ಪುರಸಭೆಯ ಅಧಿಕಾರಿಗಳು ಆಸ್ಪತ್ರೆ ಮತ್ತು ಕಾಲೇಜನ್ನು ಸೀಲ್ಡೌನ್ ಮಾಡುವ ಆದೇಶದ ಪಾಲನೆಗೆ ಮುಂದಾಗಿದ್ದಾರೆ.