ಕಾರ್ಕಳ, ಫೆ.03 (DaijiworldNews/PY): ಕುಕ್ಕುಂದೂರು ಅಯ್ಯಪ್ಪ ನಗರ ಎಂಬಲ್ಲಿ ಮದ್ಯವಯಸ್ಕನೊಬ್ಬ ಮನೆಯೊಂದಕ್ಕೆ ಅಕ್ರಮ ಪ್ರವೇಶಗೈದು ವಾಸ್ತವ್ಯ ಮನೆಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಾಯಿಸಿ ಕತ್ತಿ ಝಳಪಿಸಿ ಕೊಲೆ ಬೆದರಿಕೆಯೊಡ್ಡಿರುವ ಘಟನೆ ನಡೆದಿದೆ.

ಅಯ್ಯಪ್ಪನಗರದ ಸುಬ್ರಹ್ಮಣ್ಯ (45) ಪ್ರಕರಣದ ಆರೋಪಿ.
ಫೆಬ್ರವರಿ 2ರಂದು 4ಗಂಟೆಯ ವೇಳೆಗೆ ಈ ಘಟನೆ ನಡೆದಿದೆ. ಈ ಕುರಿತು ಟಿ.ರವಿಚಂದ್ರ ಎಂಬವರು ಕಾರ್ಕಳ ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ.