ಕಾಸರಗೋಡು, ಫೆ.04 (DaijiworldNews/MB) : ಟಿ.ವಿ. ಬಿದ್ದು ಎರಡು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಬೋವಿಕ್ಕಾನದಲ್ಲಿ ನಡೆದಿದೆ.

ತೆಕ್ಕಿಲ್ ಉಕ್ರಂಪಾಡಿಯ ನಿಸಾರ್-ಫಾಯಿಸಾ ದಂಪತಿಯ ಏಕೈಕ ಪುತ್ರ ಮುಹಮ್ಮದ್ ಶಾಕಿರ್ ಮೃತಪಟ್ಟ ಮಗು.
ಬುಧವಾರ ಮಧ್ಯಾಹ್ನ ಬೋವಿಕ್ಕಾನದ ಶಾಕಿರ್ನ ಅಜ್ಜಿ ಮನೆಯಲ್ಲಿ ಘಟನೆ ನಡೆದಿದೆ.
ಆಟವಾಡುತ್ತಿದ್ದ ಮಗು ಟಿ.ವಿಯ ಕೇಬಲ್ ವಯರ್ ಎಳೆದ ಸಂದರ್ಭದಲ್ಲಿ ಸ್ಟ್ಯಾಂಡ್ ಸಹಿತ ಬಿದಿದ್ದು, ಶಬ್ದ ಕೇಳಿ ಮನೆಯವರು ಧಾವಿಸಿ ಬಂದಾಗ ಶಾಕಿರ್ನ ಮೇಲೆ ಟಿವಿ ಹಾಗೂ ಸ್ಟಾಂಡ್ ಬಿದ್ದಿರುವುದು ಕಂಡು ಬಂದಿದೆ. ಗಂಭೀರ ಗಾಯಗೊಂಡ ಶಾಕಿರ್ನನ್ನು ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ.