ಕಾಪು, ಫೆ.04 (DaijiworldNews/MB) : ಖಾಲಿ ಎಲ್ಪಿಜಿ ಸಿಲಿಂಡರ್ಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾದ ಘಟನೆ ಫೆಬ್ರವರಿ 4 ರ ಗುರುವಾರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಿಜಯ ಬ್ಯಾಂಕಿನ ಪಂಗಲಾ ಶಾಖೆಯ ಬಳಿ ನಡೆದಿದೆ.





ಲಾರಿ ಖಾಲಿ ಗ್ಯಾಸ್ ಸಿಲಿಂಡರ್ಗಳೊಂದಿಗೆ ಮಂಗಳೂರು ಕಡೆಗೆ ಚಲಿಸುತ್ತಿತ್ತು. ಚಾಲಕನಿಗೆ ನಿಯಂತ್ರಣ ತಪ್ಪಿ ವಾಹನವು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಬಳಿಕ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ.
ಹೆದ್ದಾರಿಯುದ್ದಕ್ಕೂ ಸಿಲಿಂಡರ್ಗಳು ಉರುಳಿದ್ದು ಅದೃಷ್ಟವಶಾತ್ ಯಾರಿಗೂ ಹಾನಿ ಉಂಟಾಗಿಲ್ಲ. ಚಾಲನ ಹಾಗೂ ಸಹಾಯಕನೂ ಕೂಡಾ ಅಪಾಯದಿಂದ ಪಾರಾಗಿದ್ದಾರೆ.
ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.