ಮಂಗಳೂರು, ಫೆ.04 (DaijiworldNews/HR): ಉಳ್ಳಾಲದ ಮೊಗವೀರಪಟ್ಟಣ ಬೀಚ್ನಲ್ಲಿ ಗುರುವಾರದಂದು ಬೃಹತ್ ಗಾತ್ರದ ಸತ್ತ ನೀಲಿ ತಿಮಿಂಗಿಲ ಪತ್ತೆಯಾಗಿದೆ.

ತಿಮಿಂಗಿಲ ಉದ್ದ 10 ಅಡಿಯಾಗಿದ್ದು, ಇದು ಗುರುವಾರ ಬೆಳಿಗ್ಗೆ ಸಮುದ್ರ ತೀರಕ್ಕೆ ಬಂದು ನಿಂತಿದೆ ಎನ್ನಲಾಗಿದೆ.
ಇನ್ನು ಸುತ್ತಮುತ್ತಲಿನ ಸ್ಥಳೀಯರು ಸತ್ತ ತಿಮಿಂಗಿಲವನ್ನು ಕೊಳೆಯುವ ಮೊದಲು ಸಮುದ್ರಕ್ಕೆ ತಳ್ಳಲು ಪ್ರಯತ್ನಿಸುತ್ತಿದ್ದಾರೆ.