ಉಡುಪಿ, ಫೆ.04 (DaijiworldNews/HR): ಸಣ್ಣ ಕಥೆಗಾರ ಶ್ರೀಕಂಠ ಪುತ್ತೂರು (93) ಅವರು ಗುರುವಾರ ಬೆಳಗ್ಗಿನ ಜಾವ ನಿಧನ ಹೊಂದಿದ್ದಾರೆ.

ಶ್ರೀಕಂಠ ಅವರು ಮೂಲತಃ ಕುಂಬ್ಳೆ ನೀರ್ಚಾಲಿನವರಾಗಿದ್ದು, ತಮ್ಮ ವಿದ್ಯಾಭ್ಯಾಸವನ್ನು ಪುತ್ತೂರಿನಲ್ಲಿ ನಡೆಸಿದ್ದರು.
ಇನ್ನು ಸುಮಾರು 500ಕ್ಕೂ ಹೆಚ್ಚು ಸಣ್ಣ ಕಥೆಗಳನ್ನು ಬರೆದಿದ್ದ ಶ್ರೀಕಂಠ ಅವರು ಮಣಿಪಾಲ್ ಫೈನಾನ್ಸ್ ಕಾರ್ಪೊರೇಶನ್ ಉಡುಪಿ ವಿಭಾಗೀಯ ಕಚೇರಿಯಲ್ಲಿ ಪ್ರಚಾರ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆಂದು ತಿಳಿದು ಬಂದಿದೆ.