ಉಡುಪಿ, ಫೆ.04 (DaijiworldNews/PY): ಉಡುಪಿ ಯುವ ಕಾಂಗ್ರೆಸ್ ಚುನಾವಣೆಯ ಬಹುನಿರೀಕ್ಷಿತ ಫಲಿತಾಂಶ ಫೆ.4ರ ಗುರುವಾರದಂದು ಪ್ರಕಟವಾಗಿದ್ದು, ದೀಪಕ್ ಕೋಟ್ಯಾನ್ ಇನ್ನಾ ಅವರು ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ದೀಪಕ್ ಕೋಟ್ಯಾನ್

ವಿಶ್ವಾಸ್ ಅಮೀನ್

ಕೃಷ್ಣ ಶೆಟ್ಟಿ

ಪ್ರದೀಪ್ ಎಸ್
ದೀಪಕ್ ಕೋಟ್ಯಾನ್ ಅವರು 1186 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ವಿಶ್ವಾಸ್ ಅಮೀನ್ ಅವರು 698 ಮತಗಳನ್ನು ಪಡೆದಿದ್ದಾರೆ.
ನಟರಾಜ್ ಹೊಳ್ಳ, ಮೊಹಮ್ಮದ್ ಸಲಾಮ್, ಕೃಷ್ಣ ಶೆಟ್ಟಿ ಹಾಗೂ ಪ್ರದೀಪ್ ಎಸ್ ಅವರನ್ನು ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆ ಮಾಡಲಾಗಿದೆ. ಇವರಿಗೆ ಕ್ರಮವಾಗಿ 42, 32, 19 ಮತ್ತು 7 ಮತಗಳು ದೊರೆತಿವೆ
ಒಟ್ಟು 2352 ಮತದಾರರಿದ್ದು, ಈ ಪೈಕಿ 140 ಮಂದಿ ಮತಚಲಾಯಿಸಿಲ್ಲ. 228 ಮತಗಳನ್ನು ತಿರಸ್ಕರಿಸಲಾಗಿದೆ.
ಜ.12ರಂದು ಚುನಾವಣಾ ಪ್ರಕ್ರಿಯೆಯು ಆನ್ಲೈನ್ ಮತದಾನದ ಮೂಲ ನಡೆದಿತ್ತು.