ಮಂಗಳೂರು, ಫೆ.05 (DaijiworldNews/PY): ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಕೊಣಾಜೆ ಠಾಣೆ ವ್ಯಾಪ್ತಿಯ ನರಿಂಗಾನ ಗ್ರಾಮದ ಕೊಲ್ಲರಕೋಡಿ ಶಾಲಾ ಮೈದಾನದಲ್ಲಿ ನಡೆದಿದೆ.

ಮೃತ ಯುವಕನನ್ನು ನೆತ್ತಿಲಪದವು ಸೈಟ್ನ ರಕ್ಷಿತ್ ಸನಿಲ್ (22) ಎಂದು ಗುರುತಿಸಲಾಗಿದೆ. ಈತ ಕೊಲ್ಲರಕೋಡಿ ಪ್ರೌಢಶಾಲೆಯ ಕಚೇರಿಯ ಮುಂಭಾಗದಲ್ಲಿರುವ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಕ್ಷಿತ್ ಅದೇ ಶಾಲೆಯ ಹಳೆವಿದ್ಯಾರ್ಥಿ.
ಕೊಣಾಜೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.