ಸುಳ್ಯ, ಫೆ.05 (DaijiworldNews/HR): ಪೂಮಲೆಗೆ ಶಿಕಾರಿಗೆ ತೆರಳಿದ ವ್ಯಕ್ತಿಯೊಬ್ಬರಿಗೆ ತನ್ನ ಜೊತೆಗಾರನೊಬ್ಬ ಪ್ರಾಣಿಯೆಂದು ಗ್ರಹಿಸಿ ಗುಂಡಿಕ್ಕಿದ ಪರಿಣಾಮ ಆತನು ಗಂಭೀರ ಗಾಯಗೊಂಡ ಘಟನೆ ಅರಂತೋಡು ಸಮೀಪ ನಡೆದಿದೆ.

ಸಾಂಧರ್ಭಿಕ ಚಿತ್ರ
ಗಾಯಗೊಂಡ ವ್ಯಕ್ತಿಯನ್ನು ಅರಂತೋಡಿನ ಸತ್ಯಮೂರ್ತಿ ಎಂದು ಗುರುತಿಸಲಾಗಿದೆ.
ನಾಲ್ಕು ಮಂದಿಯ ಸತ್ಯಮೂರ್ತಿಯ ತಂಡ ಶಿಕಾರಿಗೆ ತೆರಳಿದ್ದು, ಅವರು ಬೇರೆ ಬೇರೆ ಕಡೆ ಕಾಡು ಪ್ರಾಣಿಗಳ ಬೇಟೆಯಾಡಲು ಮರೆಯಲ್ಲಿ ಕುಳಿತುಕೊಂಡಿದ್ದರು.
ಸತ್ಯಮೂರ್ತಿ ಒಂದು ಕಡೆ ಬೇಟೆಯಾಡಲು ಅಡಗಿ ಕುಳಿತಿದ್ದಾಗ ಅಲ್ಲಿ ಶಬ್ದ ಬಂದಾಗ ಅಲ್ಲಿಗೆ ಒಬ್ಬಾತ ಪ್ರಾಣಿಯೆಂದು ಗ್ರಹಿಸಿ ಗುಂಡು ಹಾರಿಸಿದ್ದಾನೆ. ಅದು ಸತ್ಯಮೂರ್ತಿಗೆ ತಾಗಿ ಗಂಭೀರ ಗಾಯಗೊಂಡಿದ್ದು, ಆತನನ್ನು ಜತೆಗಾರರು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.