ಕಾಸರಗೋಡು, ಫೆ.05 (DaijiworldNews/PY): ಚಿನ್ನಾಭರಣ ಏಜೆಂಟರಿಬ್ಬರನ್ನು ಕಾರಿನಲ್ಲಿ ಅಪಹರಿಸಿ ಸುಮಾರು 14 ಲಕ್ಷ ರೂ. ನಗದನ್ನು ದರೋಡೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಇದರಿಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತರ ಸಂಖ್ಯೆ 7ಕ್ಕೇರಿದೆ.
ಬಂಧಿತರನ್ನು ಬಂಟ್ವಾಳ ನರಿಂಗಾನ ಪಿಂಡಿಕೈನ ಅಬ್ದುಲ್ ಅಝೀಜ್ (27), ಬಂಟ್ವಾಳ ನರಿಂಗಾನ ಮೊಂಟುಗೋಳಿಯ ಅಬ್ದುಲ್ ರೌಫ್ (26), ಮೊಂಟುಗೋಳಿಯ ಮುಹಮ್ಮದ್ ಇಕ್ಬಾಲ್ (27), ಮುಹಮ್ಮದ್ ರಿಜ್ವಾನ್ (27) ಮತ್ತು ರಂಜಿತ್ ಕುಮಾರ್ (27) ಎಂದು ಗುರುತಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋಟೆಕ್ಕಾರಿನ ಅಬ್ದುಲ್ ರಹಮಾನ್ ಮತ್ತು ಬಂಟ್ವಾಳ ಮೊಂಟುಗೋಳಿಯ ನಾಸರ್ನನ್ನು ಮೂರು ದಿನಗಳ ಹಿಂದೆ ಬಂಧಿಸಲಾಗಿತ್ತು. ಪ್ರಕರಣದ ಮೊದಲ ಹಾಗೂ ಎರಡನೇ ಆರೋಪಿಗಳು ತಲಪಾಡಿ ಕೆ.ಸಿ ರೋಡ್ ಪರಿಸರದ ನಿವಾಸಿಗಳೆಂದು ಪೊಲೀಸರಿಗೆ ಮಾಹಿತಿ ಲಭಿಸಿದ್ದು, ತಲೆ ಮರೆಸಿಕೊಂಡಿದ್ದಾರೆ.
ಡಿ. 10 ರಂದು ಮುಂಜಾನೆ ಮಂಜೇಶ್ವರ ಬಳಿ ಘಟನೆ ನಡೆದಿತ್ತು. ಮಂಗಳೂರಿನಿಂದ ಕಾರಿನಲ್ಲಿ ಕಾಸರಗೋಡು ಕಡೆಗೆ ಬರುತ್ತಿದ್ದ ಚಿನ್ನಾಭರಣ ಏಜೆಂಟ್ ಮಹೇಶ್ ಮತ್ತು ಅವಿನಾಶ್ ಅವರನ್ನು ತಡೆದು ಇನ್ನೊಂದು ಕಾರಿನಲ್ಲಿ ಅಪಹರಿಸಿ ಕುರುಡಪದವು ಎಂಬ ಸ್ಥಳಕ್ಕೆ ಕೊಂಡೊಯ್ದು ದರೋಡೆ ನಡೆಸಲಾಗಿತ್ತು. ಮಂಜೇಶ್ವರ ಠಾಣಾಧಿಕಾರಿ ಕೆ.ಪಿ.ಶೈನ್, ಸಬ್ ಇನ್ಸ್ಪೆಕ್ಟರ್ ರಾಘವನ್, ಎ.ಎಸ್.ಐ ಬಾಲಚಂದ್ರ, ಸಿಬ್ಬಂದಿಗಳಾದ ಆಸ್ಟಿನ್ ತಂಬಿ, ಸತೀಶ್, ಪ್ರವೀಣ್, ರಾಜೇಶ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ.