ಮಂಗಳೂರಿನಲ್ಲಿ ಪಿಲಿ ನಲಿಕೆಯ ಸ್ಪರ್ಧೆಯ ಸಂಭ್ರಮ
ಮಂಗಳೂರು ಸೆ ೨೮: ತುಳುನಾಡಿನಲ್ಲ್ಲಿ ನವರಾತ್ರಿ, ಮಹಾನವಮಿ ಎಂದರೆ ಸಾಕು ಕರಾವಳಿ ಜನರಿಗೆ ಥಟ್ಟನೆ ನೆನಪಾಗುವುದು ಹುಲಿ ಕುಣಿತ ಇದಕ್ಕೆ ತುಳು ಭಾಷೆಯಲ್ಲೆ ಪಿಲಿ ನಲಿಕೆ ಎನ್ನುವುದು ಇನ್ನೊಂದು ವಿಶೇಷ. ಊರೀಡಿ ಮೊಳಗುವ ಹುಲಿ ಕುಣಿತಕ್ಕೆ ಚಿಕ್ಕವರು ದೊಡ್ಡವರೆನ್ನುವ ಬೇದವಿಲ್ಲ . ನವರಾತ್ರಿ ಆರಂಭವಾಗುತ್ತಿದ್ದಂತೆ ಥೇಟ್ ಹುಲಿಯಂತೇ ಕಾಣುವ ವೇಷಧಾರಿಗಳಿಂದ ರಸ್ತೆ-ವೃತ್ತಗಳಲ್ಲಿ ವಿಶಿಷ್ಟ ನರ್ತನ ಕಾಣಬಹುದು,ಮಂಗಳೂರು ದಸರಾ ವೇಳೆ ರಥಬೀದಿ ವೆಂಕಟರಮಣ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಬೋಳಾರ ಮಂಗಳಾದೇವಿ ದೇವಸ್ಥಾನಗಳಲ್ಲಿ ನವರಾತ್ರಿ ಆರಂಭ ಮತ್ತು ದಸರಾ ಮೆರವಣಿಗೆಯಲ್ಲಿ ಹುಲಿ ಕುಣಿತ ಆಕರ್ಷಣೆಯಾಗಿರುತ್ತದೆ.ಇನ್ನು ಆಧುನಿಕತೆಯ ಭರಾಟೆಗೆ ಸಿಲುಕಿ ಅದನ್ನು ಉಳಿಸುವ ದೃಷ್ಟಿಯಲ್ಲಿ ಜಿಲ್ಲೆಯ ಅನೇಕ ಸಂಸ್ಥೆಗಳು ಹಲವು ಹುಲಿವೇಷ ತಂಡಗಳನ್ನು ಅಹ್ವಾನಿಸಿ ಸ್ವರ್ಧೆ ಏರ್ಪಡಿಸುತ್ತವೆ.
ನಗರದ ಮಂಗಳಾ ಕ್ರೀಡಾಂಗಣದ ಸಮೀಪದ ವಾಲಿಬಾಲ್ ಮೈದಾನದಲ್ಲಿ ಖಾಸಗಿ ಚಾನೆಲ್ ನ ಸಹಭಾಗಿತ್ವದಲ್ಲಿ , ಜಿಲ್ಲಾ ಯುವ ಕಾಂಗ್ರೆಸ್ ನ ಅಧ್ಯಕ್ಷ ಮಿಥುನ್ ರೈ ನೇತೃತ್ವದಲ್ಲಿ
ಪಿಲಿ ನಲಿಕೆಯನ್ನು ಮುಂದಿನ ಪೀಳಿಗೆಗೆ ಅದನ್ನು ಉಳಿಸುವ ಉದ್ದೇಶದಿಂದ 4ನೇ ಆವೃತ್ತಿಯ ಪಿಲಿನಲಿಕೆ ಸ್ಪರ್ಧೆಯನ್ನು ಸೆ.29ರಂದು ಆಯೋಜಿಸಲಾಗಿದೆ.ಬೆಳಗ್ಗೆ ಸುಮಾರು 11 ಗಂತೆಗೆ ಆರಂಭವಾಗುವ ಪಿಲಿನಲಿಕೆ ಸಂಜೆ ಸಮಾರೋಪಗೊಳ್ಳಲಿದೆ. ಪ್ರತಿ ತಂಡಕ್ಕೆ 20 ನಿಮಿಷಗಳ ಅವಕಾಶ ನೀಡಲಾಗುತ್ತಿದ್ದು, ವಿಜೇತ ತಂಡಕ್ಕೆ ಪ್ರಶಸ್ತಿಯೊಂದಿಗೆ 2 ಲಕ್ಷ ಬಹುಮಾನ ನೀಡಲಾಗುವುದು ಎಂದು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಉಸ್ತುವರಿ ಸಚಿವ ರಮಾನಾಥ ರೈ ಸೇರಿದಂತೆ, ಚಿತ್ರರಂಗದ ಗಣ್ಯರು ಪಾಲ್ಗೊಳ್ಳಲಿದ್ದಾರೆ.