ಮಂಗಳೂರು,ಫೆ.06 (DaijiworldNews/HR): ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಶನಿವಾರದಂದು ಚಿನ್ನವನ್ನು ಸಾಗಿಸುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ಬೆಂಗ್ರೆ ಕಸಬಾ ಮೂಲದ ವ್ಯಕ್ತಿಯೆಂದು ಗುರುತಿಸಲಾಗಿದ್ದು, ದುಬೈನಿಂದ ಏರ್ ಇಂಡಿಯಾ ವಿಮಾನ ಮೂಲಕ ಮಂಗಳೂರಿಗೆ ಆಗಮಿಸಿದ್ದಾನೆ ಎಂದು ಹೇಳಲಾಗಿದೆ.
ಇನ್ನು ಪುಡಿ ರೂಪದಲ್ಲಿದ 31,73,920 ರೂ.ಗಳ 664 ಗ್ರಾಂ ಚಿನ್ನವನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ.
ಕಸ್ಟಮ್ಸ್ ತಂಡದ ನೇತೃತ್ವವನ್ನು ಜಿಲ್ಲಾಧಿಕಾರಿ ಪ್ರವೀಣ್ ಕಂಡಿ ವಹಿಸಿದ್ದರು ಮತ್ತು ಅಧಿಕಾರಿಗಳಾದ ನರೇಶ್ ಕುಮಾರ್ ಬಿಎಂ, ಅಧೀಕ್ಷಕರು. ಬಿಕ್ರಮ್ ಚಕ್ರವರ್ತಿ ಅಧೀಕ್ಷಕರು ಮತ್ತು ಇತರರು ಸಹಕರಿಸಿದರು.