ಮಂಗಳೂರು, ಫೆ.06 (DaijiworldNews/HR): ಸ್ವಾಮಿ ದತ್ತಾತ್ರೇಯ ಸಾಯಿ ಸ್ವರೂಪನಾಥ್ ಅವರು ಅಖಿಲ ಭಾರತ ಹಿಂದೂ ಮಹಾಸಭಾ(ಎಬಿಎಚ್ಎಂ) ದಕ್ಷಿಣ ವಲಯದ ವತಿಯಿಂದ ಇಂದು ನಡೆದ ಮಹಾಸಭಾ ಸಹಿ ಅಭಿಯಾನವನ್ನು ಪ್ರಾರಂಭಿಸಿ ದೆಹಲಿಯ ಹೊಸ ಸಂಸತ್ ಕಟ್ಟಡವನ್ನು 'ಹಿಂದೂ ರಾಷ್ಟ್ರ' ಎಂದು ಹೆಸರಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.



ಈ ಕುರಿತು ಆರ್ಯ ಸಮಾಜದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮಿ ದತ್ತಾತ್ರೇಯ ಸಾಯಿ ಸ್ವರೂಪನಾಥ್, "ಹಿಂದೂ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು ಈ ನಿಟ್ಟಿನಲ್ಲಿ ಕರೆ ನೀಡಿದ್ದಾರೆ" ಎಂದರು.
"ಎಬಿಎಚ್ಎಂ ರಾಷ್ಟ್ರಮಟ್ಟದ ಸಂಘಟನೆ ಮತ್ತು ರಾಜಕೀಯ ಪಕ್ಷವಾಗಿದೆ. ಆದರೆ ಪಕ್ಷಕ್ಕೆ ಕೆಟ್ಟ ಹೆಸರು ತರಲು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಯುವಕರನ್ನು ಮತ್ತು ಮಾಧ್ಯಮಗಳನ್ನು ದಾರಿ ತಪ್ಪಿಸಲು ಹಿಂದೂ ಮಹಾಸಭಾ, ಕರ್ನಾಟಕ ಎಂದು ಸಂಘಟನೆಯನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ ಎಬಿಎಚ್ಎಂ ಸ್ಥಾಪಿಸಲಾಯಿತು. ಇದು ಕರ್ನಾಟಕದಲ್ಲೂ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ ಇದನ್ನು ಉಪ-ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಬಿಎಚ್ಎಂ ಅನ್ನು ಒಂದೇ ರಾಜ್ಯಕ್ಕೆ ಸೀಮಿತಗೊಳಿಸಲಾಗುವುದಿಲ್ಲ. ಆದ್ದರಿಂದ, ಸಾರ್ವಜನಿಕರನ್ನು ದಾರಿ ತಪ್ಪಿಸುವವರ ವಿರುದ್ಧವೂ ನಾವು ಪ್ರಕರಣ ದಾಖಲಿಸುತ್ತೇವೆ" ಎಂದು ಅವರು ಹೇಳಿದರು.
ಪ್ರೊ. ಕೆ ಎಸ್ ಭಗವಾನ್ ಅವರ ಮುಖಕ್ಕೆ ಮಸಿ ಬಳೆದ ವಕೀಲ ಮೀರಾ ರಾಘವೇಂದ್ರ ಅವರನ್ನು ಅಭಿನಂದಿಸಿದ್ದು, ಮೀರಾ ವಿರುದ್ಧ ದಾಖಲಾದ ಪ್ರಕರಣವನ್ನು ಪೊಲೀಸರು ಕೈಬಿಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇನ್ನು ರಾಜ್ಯ ಸರ್ಕಾರವು ಗೋಹತ್ಯೆ ವಿರೋಧಿ ಕಾನೂನನ್ನು ತಂದಿದ್ದನ್ನು ಅಭಿನಂದಿಸಿದ ಅವರು, "ಕರ್ನಾಟಕದಿಂದ ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆಯನ್ನು ಸರ್ಕಾರ ನಿಲ್ಲಿಸಬೇಕು" ಎಂದು ಹೇಳಿದರು.
ಬಿಲ್ಲವ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಜಗದೀಶ್ ಅಧಿಕಾರಿಯನ್ನು ಪಕ್ಷದಿಂದ ವಜಾ ಮಾಡಬೇಕೆಂದು ಎಲ್ ಕೆ ಸುವರ್ಣ ಬಿಜೆಪಿಯವನ್ನು ಒತ್ತಾಯಿಸಿದ್ದಾರೆ.