ಬಂಟ್ವಾಳ, ಫೆ.07 (DaijiworldNews/MB) : ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿಹೊಡೆದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಲ್ಲಡ್ಕ ಪೇಟೆಯಲ್ಲಿ ಬೆಳಿಗ್ಗೆ ನಡೆದಿದೆ.



ಕಲ್ಲಡ್ಕದ ಬಿಕೆ ನಗರ ನಿವಾಸಿ ಹಿಮಾದ್ ಮೃತಪಟ್ಟ ಯುವಕ.
ಲಾರಿಯು ಮಂಗಳೂರು ಕಡೆಯಿಂದ ಅತೀವೇಗವಾಗಿ ಬಂದು ಸ್ಕೂಟರ್ಗೆ ಡಿಕ್ಕಿಯಾಗಿದ್ದು ಸ್ಕೂಟರ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಟ್ರಾಫಿಕ್ ಎಸ್.ಐ.ರಾಜೇಶ್ ಕೆ.ವಿ.ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.