ಕಾರ್ಕಳ, ಫೆ.10 (DaijiworldNews/MB) : ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ಸುರೇಶ್ಕುಮಾರ್ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿರುತ್ತಾರೆ.

ಮಂಗಳೂರು ಕೆಪಿಟಿ ಬಳಿಯ ನಿವಾಸಿಯಾಗಿರುವ ಸುರೇಶ್ಕುಮಾರ್ 1997ರಲ್ಲಿ ಮೈಸೂರಿನ ಸರಸ್ವತಿಪುರ ಅಗ್ನಿಶಾಮಕ ದಳಕ್ಕೆ ಕರ್ತವ್ಯ ಸೇರಿದ್ದರು.
2012ರಲ್ಲಿ ಕಾರ್ಕಳ ಅಗ್ನಿಶಾಮಕ ಠಾಣೆಗೆ ವರ್ಗಾವಣೆ ಹೊಂದಿರುವ ಇವರು 24 ವರ್ಷಗಳ ಸೇವಾವಧಿಯಲ್ಲಿ ಸುಮಾರು ಇಲಾಖಾ ಪ್ರಶಸ್ತಿಗಳನ್ನು ತನ್ನದಾಗಿರಿಸಿಕೊಂಡಿದ್ದಾರೆ.
ಅಗ್ನಿಶಮನ, ರಕ್ಷಣಾ ಕಾರ್ಯ ಮತ್ತು ವಿಪತ್ತು ಸಂದರ್ಭಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸಿರುವ ಸುರೇಶ್ ಕುಮಾರ್ ಅವರ ಸೇವೆಯನ್ನು ಪರಿಗಣಿಸಿ ಇಲಾಖೆಯು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಎಪ್ರಿಲ್ 14ರಂದು ಮುಖ್ಯಮಂತ್ರಿ ಬಿಎಸ್ಯಡಿಯೂರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.