ಬಂಟ್ವಾಳ, ಫೆ.10 (DaijiworldNews/PY): ಬಾಲಕಿಯೋರ್ವಳನ್ನು ಅತ್ಯಾಚಾರಗೈದು, ಬಾಲಕಿಯ ಖಾಸಗಿ ಫೋಟೊಗಳನ್ನು ಮೊಬೈಲ್ನಲ್ಲಿ ಸೆರೆಹಿಡಿದು,ಕೃತ್ಯವನ್ನು ಬಹಿರಂಗಪಡಿಸಿದಲ್ಲಿ ಖಾಸಗಿ ಫೋಟೋಗಳನ್ನು ಬೇರೆಯವರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿರುವ ಆರೋಪದ ಮೇಲೆ ಇಬ್ಬರು ಯುವಕರನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

File Photo
ಬಂಧಿತ ಆರೋಪಿಯನ್ನು ಅಬೂಬಕ್ಕರ್ ಸಿದ್ದಿಕ್ ಎಂದು ಗುರುತಿಸಲಾಗಿದ್ದು, ಚಪ್ಪಿ ಎನ್ನುವ ಮತ್ತೋರ್ವ ಆರೋಪ ಪರಾರಿಯಾಗಿದ್ದಾನೆ.
ಆರೋಪಿ ಅಬೂಬಕರ್ ಸಿದ್ದೀಕ್ ಮತ್ತು ಆತನ ಸ್ನೇಹಿತ ಚಪ್ಪಿ ಸಂತ್ರಸ್ತೆಗೆ ಫೋನ್ ಮುಖಾಂತರ ಪರಿಚಯವಾಗಿದ್ದು, ಸಲುಗೆಯಿಂದ ವರ್ತಿಸುತ್ತಿದ್ದರು. ಜ.25ರಂದು ರಾತ್ರಿ ಆರೋಪಿಗಳನ್ನು ಆಕೆಯನ್ನು ಪುಸಲಾಯಿಸಿ ಮನೆಯ ಬಳಿ ಅತ್ಯಾಚಾರವೆಸಗಿ ಆಕೆಯ ಫೋಟೋಗಳನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಕೃತ್ಯವನ್ನು ಬಹಿರಂಗಪಡಿಸಿದಲ್ಲಿ ಖಾಸಗಿ ಫೋಟೋಗಳನ್ನು ಬೇರೆಯವರಿಗೆ ಕಳುಹಿಸುವುದಾಗಿ ಬೆದರಿಸಿದ್ದಾರೆ. ಈ ಕೃತ್ಯ ನಡೆದ ನಂತರದ ದಿನಗಳನ್ನೂ ಆರೋಪಿಗಳು ಬಾಲಕಿಗೆ ಲೈಂಗಿಕ ಕ್ರಿಯೆಗೆ ಒತ್ತಾಯಪಡಿಸಿದ್ದಾರೆ ಎನ್ನಲಾಗಿದೆ.
ಫೆ. 9 ರಂದು ಈ ಬಗ್ಗೆ ಬಾಲಕಿಯ ಸಂಬಂಧಿಕರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಆರೋಪಿಗಳ ಪೈಕಿ ಅಬೂಬಕ್ಕರ್ ಸಿದ್ದೀಕ್ ಎಂಬಾತನನ್ನು ಬಂಧಿಸಲಾಗಿದೆ. ಚಪ್ಪಿ ಎಂಬಾತನ ಬಂಧನಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕರ ಸೂಚನೆಯಂತೆ ವಿಟ್ಲ ಪೊಲೀಸ್ ಉಪನಿರೀಕ್ಷಕರ ತನಿಖಾ ತಂಡ ತೆರಳಿದ್ದಾಗ ಸಂತ್ರಸ್ಥ ಬಾಲಕಿಯ ಅಣ್ಣ, ಆರೋಪಿ ಚಪ್ಪಿ ಎಂಬಾತನಿಗೆ ಪೊಲೀಸರು ಆತನ ಬಂಧನಕ್ಕೆ ಬರುತ್ತಿರುವ ಮಾಹಿತಿ ನೀಡಿ ಆರೋಪಿ ತಲೆಮರೆಸಿಕೊಳ್ಳಲು ಸಹಕರಿಸಿದ್ದು, ಈ ಹಿನ್ನೆಲೆ ಸಂತ್ರಸ್ಥೆಯ ಅಣ್ಣನನ್ನು ಬಂಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ.