ಮಂಗಳೂರು, ಸೆ 28: ಪ್ರಪಂಚದಾದ್ಯಂತ ಆತ್ಮಹತ್ಯೆಗೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುವವರ ಸಂಖ್ಯೆ ಸುಮಾರು ೮ ಲಕ್ಷ ಮಂದಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಆತ್ಮಹತ್ಯೆ ಒಂದು ಬಹುದೊಡ್ಡ ಸಮಸ್ಯೆಯಾಗಿದೆ, ಸರಿಯಾದ ಸಂದರ್ಭದಲ್ಲಿ ಅವರಿಗೆ ಸೂಕ್ತವಾದ ಮಾರ್ಗದರ್ಶನ ಸಿಗದೇ ಹೋದರೆ, ಆತ್ಮಹತ್ಯೆಯಂತಹ ನಿರ್ದಾರಕ್ಕೆ ಒಳಗಾಗುವುದು ಸಹಜ
ಈ ನಿಟ್ಟಿನಲ್ಲಿ ಮಂಗಳೂರಿನ "ಸುಶ್ ಗೆ ಚಾರಿಟೇಬಲ್ ಟ್ರಸ್ಟ್" ಕರಾವಳಿಯಲ್ಲಿ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಸೂಸೈಡ್ ಲೈಪ್ ಲೈನ್ ಎನ್ನುವ ಹೊಸ ಸಹಾಯವಾಣಿ ಆರಂಭಿಸಿಲಿದ್ದು ಈ ಬಗ್ಗೆ "ಸುಶ್ ಗೆ ಚಾರಿಟೇಬಲ್ ಟ್ರಸ್ಟ್" ಸಿಸ್ಟರ್ ಮ್ಯಾರಿ ಎವ್ಲಿನ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಇನ್ನು ಕರೆ ಮಾಡಿದವರ ಮಾಹಿತಿಗಳನ್ನು ಗುಪ್ತವಾಗಿ ಇಡಲಾಗುವುದು, ಆತ್ಮಹತ್ಯೆಯಂತ ಆಲೋಚನೆಗಳನ್ನು ದೂರ ಮಾಡಿ ಹಾಗೂ ಮಾನಸಿಕವಾಗಿ ಸದೃಡತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಈ ಹೆಲ್ಪ್ ಲೈನ್ ಅ. ೧೦ ರಂದು , ಶಾಸಕ್ ಮೋಯ್ದೀನ್ ಬಾವಾ ಉದ್ಘಾಟಿಸಲಿದ್ದು, ಆ ಬಳಿಕ ತನ್ನ ಕಾರ್ಯರಾಂಭ ಮಾಡಲಿದೆ ಎಂದು ತಿಳಿಸಿದರು.