ಮಂಗಳೂರು, ಫೆ.10 (DaijiworldNews/PY): "ಕೊರೊನಾ ಲಸಿಕಾ ಅಭಿಯಾನವು ಎರಡು ದಿನಗಳ ಕಾಲ ನಡೆಯಲಿದ್ದು, ಈ ಅಭಿಯಾನದಲ್ಲಿ ಗೃಹರಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಾವುದೇ ಭಯವಿಲ್ಲದೇ ಲಸಿಕೆ ಪಡೆದುಕೊಳ್ಳಬಹುದು" ಎಂದು ಸಮಾದೇಷ್ಟರಾದ ಡಾ. ಮುರಳೀ ಮೋಹನ್ ಚೂಂತಾರ್ ಹೇಳಿದರು.

ಫೆ.9ರಂದು ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಎರಡನೇ ಹಂತದ ಕೊರೊನಾ ನಿರೋಧಕ ಕಾರ್ಯಕ್ರಮದಲ್ಲಿ ಲಸಿಕೆಯನ್ನು ಪಡೆದು ಮಾತನಾಡಿದ ಅವರು, "ಗೃಹರಕ್ಷಕರು ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಸದರಿ ಗೃಹರಕ್ಷಕರಿಗೆ ವ್ಯಾಕ್ಸಿನ್ ನೀಡುವ ಸಲುವಾಗಿ 581 ಗೃಹರಕ್ಷಕರ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಅದಕ್ಕೆ ಅನುಮತಿ ದೊರೆತು, ಲಸಿಕೆ ಬಂದಿರುತ್ತದೆ. ಆದ್ದರಿಂದ ಈ ಅಭಿಯಾನದಲ್ಲಿ ಕೊರೊನಾ ವ್ಯಾಕ್ಸಿನ್ ಅನ್ನು ಗೃಹರಕ್ಷಕರು ಪಡೆಯಬಹುದಾಗಿದೆ" ಎಂದರು.
ಈ ಸಂದರ್ಭ, ವೆನ್ಲಾಕ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ರಾಜೇಶ್ ಉಪಸ್ಥಿತರಿದ್ದರು.
ಗೃಹರಕ್ಷಕರಾದ ದಿವಾಕರ್, ಪ್ರಸನ್ನ ಆಚಾರ್ಯ, ಸುಮಿತ್ರ, ಆಶಾ, ರೇಣುಕಾ, ಭವಾನಿ, ಸರಿತ, ಸುಕನ್ಯಾ, ಸುಮ ಲಸಿಕೆಯನ್ನು ಪಡೆದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.