ಮಂಜೇಶ್ವರ, ಫೆ. 10 (DaijiworldNews/SM): ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಂಗ ಬಂಧನದಲ್ಲಿರುವ ಮಂಜೇಶ್ವರ ಶಾಸಕ ಎಂ.ಸಿ. ಕಮರುದ್ದೀನ್ ಗೆ ಎಲ್ಲಾ ಪ್ರಕರಣಗಳಲ್ಲೂ ಜಾಮೀನು ಲಭಿಸಿದೆ.

ಹೊಸದುರ್ಗ ನ್ಯಾಯಾಲಯ ಬುಧವಾರ ಆರು ಪ್ರಕರಣಗಳಿಗೆ ಜಾಮೀನು ಮಂಜೂರುಗೊಳಿಸಿದ್ದು ಇದರಿಂದ 142 ಪ್ರಕರಣಗಳಲ್ಲೂ ಜಾಮೀನು ಲಭಿಸಿದಂತಾಗಿದೆ. ಈ ಹಿನ್ನಲೆಯಲ್ಲಿ ಶಾಸಕನಿಗೆ ಜೈಲು ಮುಕ್ತಗೊಳ್ಳಲು ಅವಕಾಶ ಲಭಿಸಿದಂತಾಗಿದೆ.
ಕಮರುದ್ದೀನ್ ಈಗ ಕಣ್ಣೂರು ಸೆಂಟ್ರಲ್ ಜೈಲ್ ನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಮರುದ್ದೀನ್ ವಿರುದ್ಧ ತೃಶ್ಯೂರ್ ನಲ್ಲಿ ಆರು ದೂರುಗಳು ದಾಖಲಾಗಿದ್ದು, ಇದರಲ್ಲಿ ಬಂಧನ ಧ್ರಡೀಕರಿಸಿಲ್ಲ. ಹೊಸ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಬಂಧನ ಧ್ರಡೀಕರಿಸದಿದ್ದಲ್ಲಿ ಶೀಘ್ರ ಕಮರುದ್ದೀನ್ ಜೈಲ್ ನಿಂದ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.