ಮಂಗಳೂರು, ಫೆ. 10 (DaijiworldNews/SM): ಕೇಂದ್ರ ಸರಕಾರ ಮಂಡನೆ ಮಾಡಿರುವ ಬಜೆಟ್ ಸೇಲ್ ಇಂಡಿಯಾ, ಲೂಟ್ ಇಂಡಿಯಾ ಬಜೆಟ್ ಎಂದು ಮಾಜಿ ಸಚಿವ ಹಾಗೂ ಶಾಸಕ ಯು.ಟಿ. ಖಾದರ್ ವ್ಯಂಗ್ಯವಾಡಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾನೂನು ಬದ್ದವಾಗಿ ಜನರಿಂದ ಲೂಟುವ ಬಜೆಟನ್ನು ಕೇಂದ್ರ ಸರಕಾರ ಮಂಡಿಸಿದೆ. ಈ ಸಾಲಿನ ಬಜೆಟ್ ನಲ್ಲಿ ಯುವ ಜನತೆಗೆ ಉದ್ಯೋಗ ಕಲ್ಪಿಸುವ ಯಾವುದೇ ಯೋಜನೆಗಳಿಲ್ಲ. ಪ್ರಕೃತಿ ವಿಕೋಪಕ್ಕೆ ಯಾವುದೇ ಪರಿಹಾರ ನೀಡಿಲ್ಲ. ಬದಲಾಗಿ ಕೊರೋನಾದ ಹೆಸರಲ್ಲಿ ಜನರಿಗೆ ತೆರಿಗೆ ಹಾಕಿ ಜನರಿಂದಲೇ ಲೂಟುವ ಕಾರ್ಯವನ್ನು ಕೇಂದ್ರ ಸರಕಾರ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಬಜೆಟ್ ನಲ್ಲಿ ಕರ್ನಾಟಕಕ್ಕೆ ಯಾವುದೇ ಯೋಜನೆ ಇಲ್ಲ. ರಾಜ್ಯದ ಸಂಸದರು ಏನು ಮಾಡ್ತಾ ಇದ್ದಾರೆ? ಬಿಜೆಪಿ ರಾಜ್ಯಧ್ಯಕ್ಷರು, ಸಂಸದರಾಗಿದ್ದು ತಮ್ಮ ಕ್ಷೇತ್ರಕ್ಕೆ ಏನು ತಂದಿದ್ದಾರೆ? ಎಂಬುವುದಾಗಿ ಮಂಗಳೂರಿನಲ್ಲಿ ಮಾಜಿ ಸಚಿವ ಯುಟಿ ಖಾದರ್ ಪ್ರಶ್ನೆ ಮಾಡಿದ್ದಾರೆ.