ಕಾಸರಗೋಡು, ಫೆ.11 (DaijiworldNews/PY): ರೈಲ್ವೆ ನಿಲ್ದಾಣ ಪರಿಸರದಿಂದ ಬೈಕ್ ಕಳವುಗೈದ ಘಟನೆಗೆ ಸಂಬಂಧಪಟ್ಟಂತೆ ಹುಬ್ಬಳ್ಳಿ ನಿವಾಸಿಯಾಗಿರುವ ಆರೋಪಿಯೋರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಹುಣಸೂರಿನ ಕೆ. ಕಾರ್ತಿಕ್ (20) ಎಂದು ಗುರುತಿಸಲಾಗಿದೆ.
ಚೆರ್ಕಳಪಾಡಿಯ ಗಣೇಶ್ ಎಂಬವರ ಬೈಕ್ ಅನ್ನು ಈತ ಕಳವು ಮಾಡಿದ್ದನು. ಫೆ. 6ರಂದು ರಾತ್ರಿ ಕಾಸರಗೋಡು ರೈಲು ನಿಲ್ದಾಣ ಪರಿಸರದಿಂದ ಬೈಕ್ ಕಳವಾಗಿತ್ತು. ಈ ಬಗ್ಗೆ ಕಾಸರಗೋಡು ನಗರ ಠಾಣಾ ಪೊಲೀಸರಿಗೆ ದೂರು ನೀಡಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಕಾಸರಗೋಡಿನಿಂದ ಆರೋಪಿಯನ್ನು ಬಂಧಿಸಿದ್ದು, ಇನ್ನೋರ್ವ ತಲೆ ಮರೆಸಿಕೊಂಡಿದ್ದಾನೆ.