ಬಂಟ್ವಾಳ, ಫೆ.12 (DaijiworldNews/PY): ವಿಟ್ಲ ಪಟ್ಟಣ ಪಂಚಾಯತ್ನ ಉಪಾಧ್ಯಕ್ಷರಾಗಿ ಉಷಾ ಕೃಷ್ಣಪ್ಪ ಆಯ್ಕೆಯಾಗಿದ್ದಾರೆ.

ಈ ಹಿಂದೆ ಪರಿಶಿಷ್ಟ ಪಂಗಡ ಮೀಸಲಾತಿಗೆ ಬಂದ ಕಾರಣ ಜಯಂತ ನಾಯ್ಕ ಅವರು ಉಪಾಧ್ಯಕ್ಷರಾಗಿದ್ದರು. ಅವರ ಅವಧಿ ಮುಗಿದಿದ್ದು, ಈಗ ಹಿಂದುಳಿದ ವರ್ಗ ಎ ಮಹಿಳೆ ಮೀಸಲಾತಿ ಪ್ರಕಟವಾಗಿದ್ದು, ಉಷಾ ಕೃಷ್ಣಪ್ಪ ಅವರು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಚುನಾವಣೆ ನಡೆಸಿಕೊಟ್ಟಿದ್ದು, ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ ಹಾಗು ಗ್ರಾಮಕರಣಿಕ ಪ್ರಕಾಶ್ ಸಹಕರಿಸಿದ್ದಾರೆ.
ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ಕಲ್ಲಕಟ್ಟ, ಸದಸ್ಯರಾದ ಅರುಣ್ ಎಂ ವಿಟ್ಲ, ರಾಮದಾಸ್ ಶೆಣೈ, ರವಿಪ್ರಕಾಶ್, ಶ್ರೀಕೃಷ್ಣ, ಲೋಕನಾಥ ಶೆಟ್ಟಿ ಕೊಲ್ಯ, ಜಯಂತ, ಚಂದ್ರಕಾಂತಿ ಶೆಟ್ಟಿ, ಇಂದಿರಾ ಅಡ್ಯಾಳಿ, ಗೀತಾ ಪುರಂದರ, ಸಂಧ್ಯಾ ಮೋಹನ್ ಪಾಲ್ಗೊಂಡಿದ್ದರು.