ಬೆಂಗಳೂರು, ಜು 12 : ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಸಂಭವಿಸಬಹುದಾಗಿದ್ದ ದುರಂತವೊಂದು ಕೊನೆಯ ಕ್ಷಣದಲ್ಲಿ ತಪ್ಪಿದೆ. ಜು.10 ಮಂಗಳವಾರ ಇಂಡಿಗೋ ವಿಮಾನಗಳು ಎದುರು - ಬದುರಾಗಿದ್ದು, ಪೈಲಟ್ಗಳ ಸಮಯ ಪ್ರಜ್ಞೆಯಿಂದ ಎರಡೂ ವಿಮಾನಗಳು ಡಿಕ್ಕಿ ಹೊಡೆದು ನಡೆಯಬೇಕಿದ್ದ ಘೋರ ದುರಂತ ತಪ್ಪಿದೆ.
ಎಟಿಸಿ ಸರಿಯಾದ ಮಾರ್ಗದರ್ಶನ ನೀಡದ ಕಾರಣದಿಂದ ಏರ್ ಇಂಡಿಯಾ ಮತ್ತು ಇಂಡಿಗೊ ವಿಮಾನ ಮುಖಾಮುಖಿಯಾಗುವ ಘೋರ ದುರಂತ ನಡೆದುಹೋಗಿರುತ್ತಿತ್ತು .ಆದರೆ ಸರಿಯಾದ ಸಮಯಕ್ಕೆ ಪೈಲೆಟ್ ಎಚ್ಚೆತ್ತುಕೊಂಡ ಕಾರಣ ಅನಾಹುತ ತಪ್ಪಿದೆ. ಕೊಯಿಮತ್ತೂರಿನಿಂದ ಬರುತ್ತಿದ್ದ 6ಇ- 779 ವಿಮಾನ 27,300 ಅಡಿ ಹಾಗೂ ಕೊಚ್ಚಿಗೆ ಹೋಗುತ್ತಿದ್ದ 6ಇ - 6505 ವಿಮಾನ 27,500 ಅಡಿ ಎತ್ತರಲ್ಲಿದ್ದಾಗ ಮುಖಾಮುಖಿಯಾಗಿದೆ. ಈ ಸಂದರ್ಭ ಎರಡೂ ವಿಮಾನಗಳ ಪೈಲಟ್ಗಳು ಟಿಸಿಎಎಸ್ ( Traffic Collision Avoidance System) ಮೂಲಕ ತತಕ್ಷಣವೇ ಎಚ್ಚೆತ್ತುಗೊಂಡಿದ್ದಾರೆ. ಇದರಿಂದ ಡಿಕ್ಕಿ ಹೊಡೆಯುತ್ತಿದ್ದನ್ನು ಪೈಲಟ್ಗಳು ತಪ್ಪಿಸಿ ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ ಕೊಯಿಮತ್ತೂರಿನ ವಿಮಾನದಲ್ಲಿ 162 ಪ್ರಯಾಣಿಕರು ಹಾಗೂ ಕೊಚ್ಚಿಗೆ ಹಾರಾಟ ಮಾಡುತ್ತಿದ್ದ ವಿಮಾನದಲ್ಲಿ 166 ಪ್ರಯಾಣಿಕರಿದ್ದರು ಎಂದು ಇಂಡಿಗೋ ಸ್ಪಷ್ಟನೆ ನೀಡಿದೆ.
ಘಟನೆ ಸಂಬಂಧ ವಿಮಾನಯಾನ ಇಲಾಖೆಯು ತನಿಖೆಗೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.